ಕಿರಣ್ ಆದಿತ್ಯ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ‘ಲೈಫ್ ಟುಡೇ’ ಚಿತ್ರ ಆಗಸ್ಟ್ 6ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಪ್ರೇಮ, ಕುಟುಂಬದ ಭಾವನೆಗಳು ಮತ್ತು ಇಂದಿನ ಯುವಜನರ ಬದುಕಿನ ಸುತ್ತ ಹೆಣೆದಿರುವ ಕಥಾಹಂದರದ ಈ ಚಿತ್ರ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಕಿರಣ್ ಆದಿತ್ಯಗೆ ನಾಯಕಿಯಾಗಿ ಲೇಖಾ ಚಂದ್ರ ಅಭಿನಯಿಸಿದ್ದಾರೆ.
ಕಾಂತ ಕನ್ನಲ್ಲಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೇಘನಾ ಪ್ರದೀಪ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ. ಸಂಗೀತವನ್ನು ಶ್ರೀಧರ್ ವಿ. ಸಂಭ್ರಮ್ ನೀಡಿದ್ದಾರೆ.
ಈಗಾಗಲೇ ಚಿತ್ರದ ಹಾಡುಗಳು ಗಮನ ಸೆಳೆದಿದ್ದು, ಟ್ರೇಲರ್ ಕಥೆಯ ಪ್ರಮುಖ ಸುಳಿವುಗಳನ್ನು ಅನಾವರಣಗೊಳಿಸಿದೆ. ಲವ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಟ್ರೇಲರ್ ಬಿಡುಗಡೆಯೊಂದಿಗೆ ‘ಲೈಫ್ ಟುಡೇ’ ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಅಧಿಕೃತ ಚಾಲನೆ ನೀಡಿದೆ.
‘ಹದಿಹರೆಯದವರ ಬದುಕಿಗೆ ಹತ್ತಿರವಾಗಿರುವ ಕಥೆಯನ್ನು ಸಿನಿಮ್ಯಾಟಿಕ್ ರೀತಿಯಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದೇವೆ’ ಎಂದು ನಿರ್ದೇಶಕ ಕಾಂತ ಕನ್ನಲ್ಲಿ ತಿಳಿಸಿದ್ದಾರೆ.
ಚಿತ್ರದಲ್ಲಿ ಕಾಕ್ರೋಚ್ ಸುಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ತಬಲಾ ನಾಣಿ ನಾಯಕಿಯ ತಂದೆಯಾಗಿ ಅಭಿನಯಿಸಿದ್ದಾರೆ.
—-





Be the first to comment