‘3 ಇಡಿಯಟ್ಸ್’ಗೂ ಸೋನಮ್ ವಾಂಗ್‌ಚುಕ್ ಗೂ ಸಂಬಂಧವಿಲ್ಲ

ರಾಜ್​​ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ‘3 ಇಡಿಯಟ್ಸ್’ ಸಿನಿಮಾಗೂ, ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಗೂ ಸಂಬಂಧವಿಲ್ಲ ಎಂದು ಸಿನಿಮಾದಲ್ಲಿ ನಟಿಸಿದ್ದ  ಆಮಿರ್ ಖಾನ್ ಹೇಳಿದ್ದಾರೆ.

 ‘3 ಇಡಿಯಟ್ಸ್’ ಸಿನಿಮಾ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಆದರೆ  ‘3 ಇಡಿಯಟ್ಸ್’ ಸಿನಿಮಾದ ನಾಯಕ ಆಮಿರ್ ಖಾನ್ ಆ ಸಿನಿಮಾಕ್ಕೂ ಸೋನಂ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

ನಾವು ‘3 ಇಡಿಯಟ್ಸ್’ ಚಿತ್ರವನ್ನು ಮಾಡುತ್ತಿದ್ದಾಗ ಸೋನಮ್ ಅವರ ಬಗ್ಗೆ ನಮಗೆ ತಿಳಿದಿರಲಿಲ್ಲ. ನಾನು ಇತ್ತೀಚೆಗೆ ನಟ ಓಮಿ ವೈದ್ಯ ( ಚತುರ್) ಅವರ ವಿಡಿಯೋವನ್ನು ನೋಡಿದೆ. ಅವರು ಕೂಡ ಹಾಗೆಯೇ ಹೇಳಿದ್ದಾರೆ.  ಅವರದ್ದು ತಪ್ಪು ಮಾಹಿತಿ.  ರಾಜಕುಮಾರ್ ಹಿರಾನಿ ಅಥವಾ ಅಭಿಜತ್ ಜೋಶಿ  (‘3 ಇಡಿಯಟ್ಸ್’ ಸಿನಿಮಾದ ಬರಹಗಾರರು) ಯಾರಿಗೂ ಸೋನಮ್ ಅವರ ಬಗ್ಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

‘ಸೋನಮ್ ಅವರು ಮಾಡುತ್ತಿರುವ ಕೆಲಸ ಒಳ್ಳೆಯದು. ಅವರನ್ನು ಗೌರವಿಸಲು ಅವರು ‘3 ಇಡಿಯಟ್ಸ್’ ಚಿತ್ರದ ಪಾತ್ರದ ಮೇಲೆ ಆಧಾರಿತರಾಗಿರಬೇಕು ಎಂದೇನೂ ಇಲ್ಲ.  ನಾವೆಲ್ಲರೂ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ತುಂಬಾ ಕಳವಳ ಹೊಂದಿದ್ದೇವೆ. ಎಲ್ಲವೂ ಸುಖಾಂತ್ಯವಾಗಬೇಕೆಂದು ನಾವು ಆಶಿಸುತ್ತೇವೆ.  ಸೋನಂ ಉಪವಾಸವನ್ನು ಕೈಬಿಡುತ್ತಾರೆ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ’ ಎಂದು ಅಮೀರ್ ಹೇಳಿದ್ದಾರೆ.

‘3 ಇಡಿಯಟ್ಸ್’ ಚಿತ್ರದಲ್ಲಿ ಚತುರ್ ರಾಮಲಿಂಗಂ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ ಅವರು ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅಮೀರ್ ಖಾನ್ ಅವರ ಪಾತ್ರ ಫುನ್ಸುಖ್ ವಾಂಗ್ಡು ಸೋನಮ್ ವಾಂಗ್‌ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ನೆನಪಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!