ಡಿಸೆಂಬರ್ 3 ರಂದು ‘ಫೌಜಿ’ ಬಿಡುಗಡೆ

ನಿರ್ದೇಶಕ ಹನು ರಾಘವಪುಡಿ ಅವರ ಮಹತ್ವಾಕಾಂಕ್ಷೆಯ, ಪ್ರಭಾಸ್ ಅಭಿನಯದ ಚಿತ್ರ ‘ಫೌಜಿ’ ಡಿಸೆಂಬರ್ 3 ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

ಚಿತ್ರತಂಡ ಆಕರ್ಷಕ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕ ಅಧಿಕೃತವಾಗಿ ಖಚಿತ ಪಡಿಸಿದೆ. ‘ಅಜ್ಞಾತಪರ್ವ ಎಂಡ್ಸ್’ ಎಂಬ ಕುತೂಹಲಕಾರಿ ಘೋಷಣೆಯೊಂದಿಗೆ ಚಿತ್ರದ ನಿರ್ಮಾಪಕರು ‘ದಿ ರೆಬೆಲಿಯನ್ ಬಿಗಿನ್ಸ್’ ಎಂದು ಸಾರಿದ್ದಾರೆ. ಈ ಘೋಷಣೆ  ಪ್ರೇಕ್ಷಕರಲ್ಲಿ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.

‘ಬಾಹುಬಲಿ’ಯ ನಂತರ ಪ್ರಭಾಸ್ ಮತ್ತೊಮ್ಮೆ  ಡ್ರಾಮಾ ಕಥೆಯೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. “ಎ ಬೆಟಾಲಿಯನ್‌ ಹೂ ಫೈಟ್ಸ್‌ ಅಲೋನ್‌” ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರ ಭಾವನಾತ್ಮಕ ಹಾಗೂ ಅದ್ಭುತ ದೃಶ್ಯ ವೈಭವದ ಅನುಭವವನ್ನು ನೀಡುವ ಭರವಸೆ ನೀಡಿದೆ. ಈ ಚಿತ್ರ  ಪ್ರಭಾಸ್ ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಪ್ರಾಜೆಕ್ಟ್ ಎನಿಸಿಕೊಂಡಿದೆ.

ಪ್ರಭಾಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟರ್ ಚಿತ್ರದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ರಕ್ತಸಿಕ್ತವಾದ ಉಡುಪಿನಲ್ಲಿ, ಸುತ್ತಲೂ ಶವಗಳ ನಡುವೆ ಕಲ್ಲಿನ ಮೇಲೆ ಕುಳಿತು ಗನ್ ಹಿಡಿದಿರುವ ಪ್ರಭಾಸ್ ಅವರ ಲುಕ್‌, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಇದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅತ್ಯಂತ ದುಬಾರಿ ಮತ್ತು ಅದ್ದೂರಿ ಚಿತ್ರಗಳಲ್ಲಿ ಒಂದಾಗಿದೆ. ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!