23ಕ್ಕೆ ಥಿಯೇಟರ್‌ನಲ್ಲಿ “ಪ್ರೇತ’ !

“ಕಲಾಕಾರ್‌’ ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್‌ ರಾಜ್‌ ಸಿನಿಮಾ “ಪ್ರೇತ’  ಇದೇ ತಿಂಗಳ 23ಕ್ಕೆ ತೆರೆಗೆ ಬರಲಿದೆ.

ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾರರ್‌-ಥ್ರಿಲ್ಲರ್‌ “ಪ್ರೇತ’ದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಬಿ. ಎಂ. ವೆಂಕಟೇಶ್‌, ಅಮಿತ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಹರೀಶ್‌ ರಾಜ್‌ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ “ಪ್ರೇತ’ ಸಿನಿಮಾ ನಿರ್ಮಾಣವಾಗಿದೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್  3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಸಿನಿಮಾಗೆ ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಇದೆ.  ಪ್ರಮೋದ್ ಮರವಂತೆ, ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆರ್ಟ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!