‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌?!

ʻಪ್ರೇಮಲೋಕ 2′ ಚಿತ್ರಕ್ಕೆ  ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ.

ಹಂಪಿ ಉತ್ಸವದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌  ಒಂದು ವರ್ಷದಿಂದ ʻಪ್ರೇಮಲೋಕ 2′ ಚಿತ್ರಕ್ಕೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದರು.  ‘ಪ್ರೇಮಲೋಕ 2′ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ʻಪ್ರೇಮಲೋಕ 2’ ಸಿನಿಮಾ ಸೆಟ್ಟೇರಲಿದೆ. ರವಿಚಂದ್ರನ್‌  ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.

ಮೇ 30 ರವಿಚಂದ್ರನ್ ಅವರ ಬರ್ತ್​ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ರವಿಚಂದ್ರನ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿದೆ.

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ‘ಪ್ರೇಮಲೋಕ’ ಚಿತ್ರದ ಮೂಲಕ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಸಿನಿಮಾ 11 ಹಾಡುಗಳನ್ನು ಹೊಂದಿತ್ತು.

ʻʻದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇರಲ್ಲ. ಕೇವಲ ಪ್ರೀತಿ ವಿಚಾರ ಇರಲಿದೆ” ಎಂದು ರವಿಚಂದ್ರನ್‌ ಅವರು ಹೇಳಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!