ಕಂಬ್ಯಾಕ್ ಮಾಡಿದ ನಟಿ ಪ್ರೀತಿ ಜಿಂಟಾ

ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಹಲವು ವರ್ಷಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

ಪ್ರೀತಿ ಜಿಂಟಾ ‘ಲಾಹೋರ್ 1947’  ಸಿನಿಮಾದ ಮೂಲಕ  ಸನ್ನಿ ಡಿಯೋಲ್ ಜೊತೆ ನಟಿಸುತ್ತಿದ್ದಾರೆ. ಆರು ವರ್ಷಗಳ ಬಳಿಕ ಅವರು ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. 

ಖ್ಯಾತ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ಪ್ರೀತಿ ಜಿಂಟಾ  ಹಂಚಿಕೊಂಡಿದ್ದಾರೆ.

ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ‘ಹೀರೋ: ಲವ್ ಸ್ಟೋರಿ ಆಫ್ ಸ್ಪೈ, ‘ಫರ್ಜ್​’, ‘ಭಯ್ಯಾಜಿ ಸೂಪರ್​ಹಿಟ್’ ಸಿನಿಮಾಗಳಲ್ಲಿ ನಟಿಸಿದ್ದರು. ‘ಭಯ್ಯಾಜಿ ಸೂಪರ್​ಹಿಟ್’ 2018ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಪ್ರೀತಿ ನಟನೆ ಮಾಡಲಿಲ್ಲ. ಈಗ ‘ಲಾಹೋರ್ 1947’ ಚಿತ್ರದ ಮೂಲಕ ತೆರೆ ಮೇಲೆ ಮೋಡಿ ಮಾಡಲು ಈ ಜೋಡಿ ಒಂದಾಗಿದೆ.

ಲಾಹೋರ್ 1947′ ಸಿನಿಮಾ ಸ್ವಾಂತತ್ರ್ಯದ ಕಥೆ ಹೊಂದಿದೆ ಎನ್ನಲಾಗಿದೆ. ಹಿರಿಯ ನಟಿ ಶಬಾನಾ ಆಜ್ಮಿ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಎ ಆರ್ ರೆಹಮಾನ್ ಹಾಗೂ ಜಾವೇದ್ ಅಖ್ತರ್ ಸಿನಿಮಾದ ಭಾಗವಾಗಲಿದ್ದಾರೆ.

ದುವೆಯಾದ ಬಳಿಕ ಪ್ರೀತಿ ಜಿಂಟಾ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಕಾರಣದಿಂದ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!