ಇಂದು ‘ಪುಷ್ಪ 2’ ಪ್ರೋಮೋ ಬಿಡುಗಡೆ

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ‘ಪುಷ್ಪ 2’ ಚಿತ್ರದ ಮೊದಲ ಹಾಡಿನ ಪ್ರೋಮೋ  ಏಪ್ರಿಲ್​ 24ರಂದು ಸಂಜೆ 4.05ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾಗೆ ದೇವಿ ಶ್ರೀ ಪ್ರಸಾದ್​ ಅವರು ಸಂಗೀತ ನೀಡಿದ್ದಾರೆ.  ‘ಪುಷ್ಪ 2’ ಚಿತ್ರತಂಡದವರು ಆರಂಭದಲ್ಲೇ ಟೈಟಲ್​ ಸಾಂಗ್​ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಹಾಡಿನ ಹೆಸರು ‘ಪುಷ್ಪ ಪುಷ್ಪ..’. ಇದು ಟೈಟಲ್​ ಸಾಂಗ್​ ಎಂದು ಫ್ಯಾನ್ಸ್​ ಊಹಿಸಿದ್ದಾರೆ.  ಏ.24ರ ಸಂಜೆ ಬಿಡುಗಡೆ ಆಗುತ್ತಿರುವುದು ಬರೀ ಪ್ರೋಮೋ ಮಾತ್ರ. ಪೂರ್ತಿ ಸಾಂಗ್​ ಯಾವಾಗ ಬರಲಿದೆ ಎಂಬ ಮಾಹಿತಿ ಈ ಪ್ರೋಮೋದಲ್ಲಿ ಇರಲಿದೆ.

ಈಗಾಗಲೇ ‘ಪುಷ್ಪ 2’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ಮೊದಲ ಸಾಂಗ್​ ಬಿಡುಗಡೆ ಆದ ನಂತರ ಕ್ರೇಜ್​ ಹೆಚ್ಚಾಗುವುದು ಗ್ಯಾರಂಟಿ. ಅಲ್ಲು ಅರ್ಜುನ್​ ಅವರ ವೃತ್ತಿಜೀವನದಲ್ಲಿ ಇದು ಅತಿ ದೊಡ್ಡ ಸಿನಿಮಾ ಆಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ.

ಇತ್ತೀಚೆಗೆ ಅಲ್ಲು ಅರ್ಜುನ್​ ಅವರ ಬರ್ತ್​ಡೇ ಪ್ರಯುಕ್ತ ಗಂಗಮ್ಮ ಜಾತ್ರೆ ಸನ್ನಿವೇಶದ ಟೀಸರ್​ ಬಿಡುಗಡೆ ಆಗಿತ್ತು. ಅದರಲ್ಲಿ ಅಲ್ಲು ಅರ್ಜುನ್​ ಅವರು ಗ್ರ್ಯಾಂಡ್​ ಎಂಟ್ರಿ ನೀಡಿದ್ದರು.  ಟೀಸರ್​ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಸಿನಿಮಾದ ಮೊದಲ ಸಾಂಗ್​ ಬಗ್ಗೆ ಅಪ್​ಡೇಟ್​ ಸಿಕ್ಕಿದೆ.

‘ಪುಷ್ಪ 2’  ಚಿತ್ರದ ಹಾಡುಗಳು ಬರೋಬ್ಬರಿ 60 ಕೋಟಿ ರೂಪಾಯಿಗೆ ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸಾಂಗ್ಸ್​ ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

 ‘ಪುಷ್ಪ 2’ ಸಿನಿಮಾ  ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದು, ವಿದೇಶಗಳಲ್ಲೂ ಪ್ರಚಾರ ಮಾಡಲಾಗುತ್ತಿದೆ. ಆಗಸ್ಟ್​ 15ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ  ಚಿತ್ರವನ್ನು ನಿರ್ಮಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!