ಪೀಟರ್

Movie Review: ಕ್ರೈಂ ಥ್ರಿಲ್ಲರ್ ಸಿನಿಮಾ ‘ಪೀಟರ್’

ಚಿತ್ರ: ಪೀಟರ್
ನಿರ್ದೇಶನ: ಸುಕೇಶ್ ಶೆಟ್ಟಿ
ತಾರಾ ಬಳಗ: ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ್ ನಾಡಗೌಡ, ಇತರರು
ರೇಟಿಂಗ್: 3/5

ಊರನ್ನು ಬಿಟ್ಟು ಹೋಗುವ ಯುವಕನೊಬ್ಬ ಮತ್ತೆ ಅದೇ ಊರಿಗೆ ಮರಳಲು ಕಾರಣ ಆಗುವ ಕ್ರೈಂ ಥ್ರಿಲ್ಲರ್ ಕಥಾ ವಸ್ತುವಿನ ಚಿತ್ರ ಈ ವಾರ ಬಿಡುಗಡೆ ಆಗಿರುವ ‘ ಪೀಟರ್ ‘.

ಪೀಟರ್ ಚಿತ್ರ ಕೊಡಗಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಹಳ್ಳಿ ಒಂದರಲ್ಲಿ ವಾಸಿಸುತ್ತಿದ್ದ ಪೀಟರ್ ಕೆಲವು ವರ್ಷಗಳ ನಂತರ ತನ್ನ ಊರಿಗೆ ಮರಳುತ್ತಾನೆ. ಹೀಗೆ ಆತ ವಾಪಸ್ ಮರಳುವಾಗ ಊರು ಬಿಡಲು ಕಾರಣವಾದ ವಿಷಯಗಳು ಪ್ರಸ್ತಾವನೆ ಆಗುತ್ತವೆ. ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ಕಥಾನಾಯಕ ರಾಜೇಶ್ ಧ್ರುವ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರದಲ್ಲಿ ಲವರ್ ಬಾಯ್ ಆಗಿ, ಇನ್ನೊಂದು ಪಾತ್ರದಲ್ಲಿ ಚಂಡೆ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಬದುಕಿನ ಕಠಿಣ ಪರಿಸ್ಥಿತಿಗಳಿಗೆ ಸಾಕ್ಷಿಯಾಗುವ ಪಾತ್ರಕ್ಕೆ ರಾಜೇಶ್ ಧ್ರುವ ಜೀವ ತುಂಬಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಪ್ರತಿಮಾ ನಾಯಕ್ ಮಿಂಚಿದ್ದಾರೆ. ಉಳಿದಂತೆ ರಾಧಾ ಟೀಚರ್ ಪಾತ್ರದಲ್ಲಿ ಜಾನ್ವಿ ರಾಯಲ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಮ್ ನಾಡಗೌಡ, ರವೀಕ್ಷಾ ಶೆಟ್ಟಿ, ಸೇರಿದಂತೆ ಉಳಿದ ಪೋಷಕ ಕಲಾವಿದರ ನಟನೆ ಗಮನ ಸೆಳೆಯುತ್ತದೆ.

ನಿರ್ದೇಶಕರು ಚಂಡೆ ಮೇಳವನ್ನು ಕಥೆಯೊಳಗೆ ಬಳಸಿಕೊಂಡ ರೀತಿ ಇಷ್ಟವಾಗುತ್ತದೆ. ಚಿತ್ರದ ಮೇಕಿಂಗ್, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಗಮನ ಸೆಳೆಯುತ್ತದೆ.

ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಚಿತ್ರದ ಸೊಗಸನ್ನು ಹೆಚ್ಚಿಸಿದೆ. ರಿತ್ವಿಕ್ ಮರಳಿಧರ್ ಅವರ ಸಂಗೀತದ ಹಾಡುಗಳು ಗುನುಗುವಂತೆ ಇವೆ. ಹಿನ್ನೆಲೆ ಸಂಗೀತ ಸಿನಿಮಾದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ.

ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಪೀಟರ್ ಚಿತ್ರ ಖುಷಿ ನೀಡುವ ಸಾಧ್ಯತೆ ಹೆಚ್ಚಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!