ಎಸ್ ಆರ್ ಕೆ ಸಿನಿಮಾಕ್ಕೆ ಮತ್ತೆ ಬಂದ ಪೀಟರ್ ಹೇನ್ಸ್

ಡಾ ರಾಜಕುಮಾರ್ ಕುಟುಂಬದಿಂದ ಮತ್ತೊಬ್ಬ ಕುಡಿ ಲಕ್ಕಿ ಗೋಪಾಲ್ ಪ್ರಥಮ ನಿರ್ದೇಶನದಲ್ಲಿ `ಎಸ್ ಆರ್ ಕೆ’ ಎಂಬ ಸಿನಿಮಾದ ಶೀರ್ಷಿಕೆ ಈ ಹಿಂದೆ ಬಿಡುಗಡೆಯಾಗಿತ್ತು. ಈಗ ಈ ಕಿರಣ್ ಕುಮಾರ್ ಪೆÇ್ರಡಕ್ಷನ್ ಅಡಿಯಲ್ಲಿ ಡಾ ಶಿವರಾಜಕುಮಾರ್ ಅಭಿನಯದ, ಕಿರಣ್ ಕುಮಾರ್ ಸಿ ಗೌಡ ನಿರ್ಮಾಣದ ಈ ಚಿತ್ರಕ್ಕೆ ಸ್ಟಂಟ್ಸ್ ನಿರ್ದೇಶನ ಮಾಡಲು ಪೀಟರ್ ಹೇನ್ಸ್ ಅವರನ್ನು ಮತ್ತೆ ಕರೆತರುತಿದ್ದಾರೆ. ಪೀಟರ್ ಹೇನ್ಸ್ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಟಂಟ್ ನಿರ್ದೇಶಕ. ಈ ಹಿಂದೆ ಡಾ ಶಿವರಾಜಕುಮಾರ್ ಅಭಿನಯದ `ಸತ್ಯ ಇನ್ ಲವ್’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದವರು.

ನಿರ್ದೇಶಕ ಲಕ್ಕಿ ಗೋಪಾಲ್ ಅವರು ಹೇಳಿದ ಕಥೆ ಕೇಳಿ ಖುಷಿಯಿಂದ ಸಾಹಸ ನಿರ್ದೇಶನ ಮಾಡಲು ಪೀಟರ್ ಹೇನ್ಸ್ ಒಪ್ಪಿಕೊಂಡಿದ್ದಾರೆ. ಇದರಲ್ಲಿ ವಿಭಿನ್ನ ಶೈಲಿಯ ಸಾಹಸ ದೃಶ್ಯಗಳನ್ನು ಸೆರೆ ಹಿಡಿಯಲಾಗುವುದು.
ಮಫ್ತಿ ಚಿತ್ರÀಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್ ಕುಮಾರ್ ಕ್ಯಾಮರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ.

ಇನ್ನಿತರ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಸಲಾಗುತ್ತಿದೆ ಎಂದು ನಿರ್ದೇಶಕ ಲಕ್ಕಿ ಗೋಪಾಲ್ ತಿಳಿಸಿದ್ದಾರೆ. ಎಸ್ ಆರ್ ಕೆ ಅಂದರೆ ಶಿವರಾಜಕುಮಾರ್ ಸಹ ಹೌದು ಮತ್ತು ಸಿಂಪಲ್ ರೂಲಿಂಗ್ ಕಿಂಗ್ ಸಹ ಆಗುತ್ತದೆ ಎಂದು ಸ್ವತಃ ಶಿವಣ್ಣ ಈ ಹಿಂದೆ ತಿಳಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!