ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಸಸ್ಪೆನ್ಸ್ ಥ್ರಿಲ್ಲರ್ ‘ಸರ್ಚ್’ ಚಿತ್ರದೊಂದಿಗೆ ಮರಳಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭ ನಾಗರಬಾವಿ ಮುದ್ದಿನ ಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಈ ವೇಳೆ ಹಿರಿಯ ನಟ ಶ್ರೀನಗರ ಕಿಟ್ಟಿ , ಎಲ್ ಜೆಪಿ ಪಕ್ಷದ ರಾಜ್ಯಾದ್ಯಕ್ಷ ಜಗನ್ನಾಥ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಇದ್ದರು.
ವೈ.ಬಿ. ರಮೇಶ್ ಕೋಟೆ ಅವರ ನಿರ್ದೇಶನದ ಪ್ರಥಮ ಚಿತ್ರ ಇದು. ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಅದನ್ನು 25 ರಾತ್ರಿಗಳಲ್ಲಿ ಚಿತ್ರೀಕರಿಸಲಿದ್ದೇವೆ. ಬೆಂಗಳೂರಲ್ಲೇ ಸರ್ಕಲ್ ಸೆಟ್ ಹಾಕಿ ಬೆಂಗಳೂರಿನ ಕಥೆಯಾಗಿ ಚಿತ್ರ ಮಾಡಲಿದ್ದೇವೆ ಎಂದರು.
ಚಿತ್ರದ ನಾಯಕ ಪಂಕಜ್ , “ಉಗ್ರಂ ಮುರಳಿ ಅವರು ಚಿತ್ರದ ಟೈಟಲ್ ಲಾಂಚ್ ಮಾಡಿ ಕೊಟ್ಟರು. ಕಥೆಯೇ ನಾನು ಈ ಚಿತ್ರ ಒಪ್ಪಲು ಪ್ರಮುಖ ಕಾರಣ. ಒಂದೇ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಚಾಲೆಂಜ್ ಹುಡುಕಾಟ ನಡೆಸುವ ವಿಭಿನ್ನ ವ್ಯಕ್ತಿಯ ಪಾತ್ರ. ಗ್ಯಾಪ್ ಬಳಿಕ ಚಿತ್ರ ಮಾಡುತ್ತಿರುವುದೇನೋ ನಿಜ. ನಮ್ಮ ತಂದೆಯ ಮಾತಿನಂತೆ ಪ್ರತಿ ಸಿನಿಮಾಗಾಗಿ ನಾನು ಸಮರ್ಪಣಾಭಾವದಿಂದ ಕೆಲಸ ಮಾಡುತ್ತೇನೆ. ನಿರ್ದೇಶಕ ರಮೇಶ್ ಅವರು ಕಲಾವಿದರಿಂದ ಇದೇ ಬೇಕು ಹೇಳಿ ಕೆಲಸ ತೆಗೆಯಬಲ್ಲವರು. ಹಾಗಾಗಿ ಸಹಜವಾಗಿ ನಿರೀಕ್ಷೆಗಳಿವೆ’ ಎಂದರು.
ಪಂಕಜ್ ಅವರ ಜೋಡಿಯಾಗಿ ಧಾಮಿನಿ ನಟಿಸುತ್ತಿದ್ದಾರೆ. ಯುವ ನಿರ್ಮಾಪಕ ಯೋಗೇಶ್ . ಎನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸುಭಾನ್ ಚಿತ್ರದ ಸಹ ನಿರ್ಮಾಪಕ. ಅಶೋಕ್ ಕೆ ರಾಜ್ ಛಾಯಾಗ್ರಹಣ ಇರುವ ಸರ್ಚ್ ಚಿತ್ರಕ್ಕೆ ಶ್ರೀ ಅಂಜನ್ ಸಂಗೀತ ಸಂಯೋಜಕರು. ಸಪ್ಟಬರ್ 15ರಿಂದ ಚಿತ್ರೀಕರಣ ಶುರುವಾಗಲಿದೆ.
—–





Be the first to comment