ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ರೋಜಾ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ ಬಹುಭಾಷಾ ನಟಿ ರೋಜಾ ಅವರು ಆಗಮಿಸುತ್ತಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ  ಸೆ. 27ರಂದು ನಡೆಯಲಿರುವ  ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ವೀರಕಪುತ್ರ ಶ್ರೀನಿವಾಸ ಅವರು  ರೋಜಾ ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

ಸುಮಾರು 1 ಕೋಟಿ  ವೆಚ್ಚದಲ್ಲಿ ನಡೆಯಲಿರುವ  ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.  ಮಹೋತ್ಸವದ  ಆಕರ್ಷಣೆಯಾಗಿ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದ ಮೆರವಣಿಗೆ ನಡೆಯಲಿದೆ. ಸೆ.27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ.

ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.  ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ 18 ಗಂಟೆಗಳ ಕಾಲ ಮುಂದುವರಿಯಲಿದೆ.

ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು  ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಸಜ್ಜಾಗುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!