‘ಧುರಂಧರ್’ ಸಿನಿಮಾಗೆ ಪ್ರತಿಯಾಗಿ ಪಾಕಿಸ್ತಾನಿದಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಿಸಲಾದ ‘ಮೇರಾ ಲಿಯಾರಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಗಿದೆ.
ಕರಾಚಿಯ ಲಿಯಾರಿ ಪ್ರದೇಶದ ಹಿನ್ನೆಲೆಯಲ್ಲಿ ನಿರ್ಮಾಣವಾದ ‘ಮೇರಾ ಲಿಯಾರಿ’ ಚಿತ್ರವನ್ನು ನಿರ್ದೇಶಕ ಅಬು ಅಲಿಹಾ ನಿರ್ದೇಶಿಸಿದ್ದರು. ಲಿಯಾರಿ ಪ್ರದೇಶವನ್ನು ಪಾಸಿಟಿವ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದ ಕ್ರೀಡಾ ಡ್ರಾಮಾದಲ್ಲಿ ಆಯೇಷಾ ಒಮರ್ ಮತ್ತು ದನನೀರ್ ಮೊಬೀನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಕೊರತೆಯಿಂದ ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗಿದೆ ಎಂದು ವರದಿಯಾಗಿದೆ.
ಹಲವೆಡೆ ಪ್ರದರ್ಶನ ಸಮಯದಲ್ಲಿ ಥಿಯೇಟರ್ಗಳಲ್ಲಿ ಪ್ರೇಕ್ಷಕರೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಒಟ್ಟು 22 ಟಿಕೆಟ್ಗಳು ಮಾತ್ರ ಮಾರಾಟವಾದ ಹಿನ್ನೆಲೆ ಚಿತ್ರಮಂದಿರ ಮಾಲೀಕರು ಪ್ರದರ್ಶನವನ್ನು ರದ್ದುಗೊಳಿಸಿ ಬೇರೆ ಸಿನಿಮಾಗಳನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಸಿಂಧ್ ಸರ್ಕಾರ ಚಿತ್ರಕ್ಕೆ ಬೆಂಬಲ ನೀಡಿದರೂ ಸಿನಿಮಾ ಉಳಿಸಿಕೊಳ್ಳಲು ಸಹಾಯವಾಗಿಲ್ಲ.
ಭಾರತದ ‘ಧುರಂಧರ್’ ಚಿತ್ರ ಪಾಕಿಸ್ತಾನದ ಇಮೇಜ್ಗೆ ಹಾನಿ ಮಾಡಿದೆ ಎಂಬ ಟೀಕೆಯ ನಡುವೆ ‘ಮೇರಾ ಲಿಯಾರಿ’ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಕಳಪೆ ಕಥೆ, ಕಮರ್ಷಿಯಲ್ ಎಲಿಮೆಂಟ್, ಪ್ರಚಾರದ ಕೊರತೆಯಿಂದ ಪ್ರೇಕ್ಷಕರ ಸಂಪರ್ಕ ಸಾಧಿಸಲು ವಿಫಲವಾಗಿದೆ. ಈಗ ಪಾಕಿಸ್ತಾನದ ಈ ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರದಲ್ಲಿ ಲಿಯಾರಿ ಭಾಗದ ಗ್ಯಾಂಗ್ ವಾರ್, ಅಪರಾಧ ಜಾಲ, ಭಯೋತ್ಪಾದನೆಯ ಕಥೆಯನ್ನು ತೋರಿಸಲಾಗಿತ್ತು. ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಅಭಿನಯದ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು.





Be the first to comment