ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟ ವಯಸ್ಕರು ಮಾತ್ರ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ವೀಕ್ಷಿಸಬಹುದಾಗಿದೆ.
‘ಟಾಕ್ಸಿಕ್’ ಸಿನಿಮಾದ ಒಟ್ಟು ಅವಧಿ ಸುಮಾರು 3 ಗಂಟೆ 14 ನಿಮಿಷ. ಆ್ಯಕ್ಷನ್, ಗ್ಯಾಂಗ್‌ಸ್ಟರ್ ಹಿನ್ನೆಲೆ ಹಾಗೂ ದೊಡ್ಡ ಕಥಾಹಂದರ ಹೊಂದಿರುವ ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ದೀರ್ಘ ಅವಧಿಯನ್ನು ಬಳಸಿಕೊಂಡಿದ್ದಾರೆ.
ಚಿತ್ರದಲ್ಲಿ ಕ್ರೌರ್ಯ, ಅಶ್ಲೀಲ ಭಾಷೆ ಹಾಗೂ ವಯಸ್ಕರಿಗೆ ಸಂಬಂಧಿಸಿದ ದೃಶ್ಯಗಳಿರುವ ಹಿನ್ನೆಲೆಯಲ್ಲಿ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಹೀಗಾಗಿ ಯಶ್ ಅವರ ಫ್ಯಾಮಿಲಿ ಆಡಿಯನ್ಸ್‌ಗಳಲ್ಲಿ ಮಕ್ಕಳನ್ನು ಕರೆದುಕೊಂಡು ಸಿನಿಮಾ ನೋಡಲು ಬಯಸಿದ್ದವರಿಗೆ ಈ ಬಾರಿ ಅವಕಾಶವಿಲ್ಲ.
ಚಿತ್ರದ ಟೈಟಲ್ ಘೋಷಣೆಯ ಸಂದರ್ಭದ ‘A Fairy Tale for Grown-Ups’ ಎಂಬ ಟ್ಯಾಗ್‌ಲೈನ್ ಗಮನ ಸೆಳೆದಿತ್ತು. ಟೀಸರ್ ಹಾಗೂ ಟ್ರೇಲರ್‌ನಲ್ಲೂ ಸಿನಿಮಾದ ವಯಸ್ಕರ ಕಥಾಹಂದರದ ಸುಳಿವು ಸಿಕ್ಕಿತ್ತು. ಸೆನ್ಸಾರ್ ಪ್ರಮಾಣಪತ್ರವೂ ಅದನ್ನೇ ದೃಢಪಡಿಸಿದೆ.
ವಿಶ್ವಾದ್ಯಂತ ಆಗಸ್ಟ್ 26ರಂದು ತೆರೆಗೆ ಬರಲಿರುವ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
—-




Be the first to comment