ರಾಜ್ ಶೆಟ್ಟಿ ನಟನೆಯ ‘ಬಂದರ್’ ಒಟಿಟಿಗೆ

ಕನ್ನಡ ಚಿತ್ರರಂಗದ ರಾಜ್ ಬಿ ಶೆಟ್ಟಿ ನಟಿಸಿದ ಹಿಂದಿ ಸಿನಿಮಾ ‘ಬಂದರ್’ ಆಗಸ್ಟ್ 28ರಂದು ಜೀ5 ಒಟಿಟಿಯಲ್ಲಿ  ರಿಲೀಸ್ ಆಗಲಿದೆ.

ಸಿನಿಮಾದಲ್ಲಿ ಬಾಬಿ ಡಿಯೋಲ್ ನಾಯಕ. ಟಿವಿ ಸೆಲೆಬ್ರಿಟಿಯೊಬ್ಬನ ಮೇಲೆ ಆಕೆಯ ಗರ್ಲ್​​ಫ್ರೆಂಡ್ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿ ಜೈಲು ಪಾಲು ಮಾಡುವ ಹಾಗೂ ಜೈಲಿನಲ್ಲಿ ಆ ಸೆಲೆಬ್ರಿಟಿ ಎದುರಿಸುವ ಸಮಸ್ಯೆ, ಅಲ್ಲಿಂದ ಬಿಡುಗಡೆ ಆಗುವುದು ಈ ನಡುವೆ ಆತ ಜೀವನ ಪಾಠಗಳನ್ನು ಕಲಿಯುವ ಕತೆಯನ್ನು ‘ಬಂದರ್’ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಖೈದಿಯ ಪಾತ್ರದಲ್ಲಿ ನಟಿಸಿದ್ದಾರೆ.

ಅನುರಾಗ್ ಕಶ್ಯಪ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರಿಗೆ ‘ಬಂದರ್’ ಮೊದಲ ಹಿಂದಿ ಸಿನಿಮಾ. ‘ಬಂದರ್’ ಸಿನಿಮಾದ ‘ಪಿಂಜರಾ’ ಹಾಡು ಸಖತ್ ಹಿಟ್ ಆಗಿದೆ. ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಮತ್ತು ಮತ್ತೊಬ್ಬ ಕನ್ನಡದ ಯುವ ನಿರ್ದೇಶಕ ನಟೇಶ್  ಸಖತ್ ಆಗಿ ಕುಣಿದಿದ್ದಾರೆ.

ಈ ಸಿನಿಮಾ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.  ಇದು ‘ಮೀಟೂ’ ಚಳವಳಿಗೆ ವಿರುದ್ಧವಾದ ಧ್ವನಿ ಹೊಂದಿದೆ ಎಂದು ಸಿನಿಮಾದ ಬಗ್ಗೆ ಕೆಲವರು ಟೀಕೆ  ಮಾಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!