ನೀ ನಂಗೆ ಅಲ್ಲವಾ

ಶರಣ್ ಕಂಠಸಿರಿಯಲ್ಲಿ ‘ನೀ ನಂಗೆ ಅಲ್ಲವಾ’ ಚಿತ್ರದ ಹಾಡು

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರದ ಮೊದಲ ಹಾಡು “ನೋ ನೋ” ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡು “ಜಿಗಿ ಜಿಕ್ಕ ಜಿಕ್ಕ” ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಮನೋಜ್ ಪಿ ನಡಲುಮನೆ ಅವರು ಬರೆದಿರುವ ಈ ಹಾಡನ್ನು ಹೆಸರಾಂತ ನಟ ಶರಣ್ ಹಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ರಾಮ್ ಕಿರಣ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ನಾಯಕ ರಾಹುಲ್ ಆರ್ಕಾಟ್, ನಟಿ ಐಶ್ವರ್ಯ ಸಿಂಧೋಗಿ ಹಾಗೂ ನಟ ಗಿರಿ ಶಿವಣ್ಣ ಹೆಜ್ಜೆ ಹಾಕಿದ್ದಾರೆ. ನಟರಾದ ನವೀನ್ ಶಂಕರ್, ವಿಕಾಶ್ ಉತ್ತಯ್ಯ ಹಾಗೂ ಸಿದ್ದು ಮೂಲಿಮನಿ ಈ ಹಾಡನ್ನು ಅನಾವರಣ ಮಾಡಿದರು. ಹಾಡು ಚೆನ್ನಾಗಿದೆ. ಚಿತ್ರ‌ ಕೂಡ ಚೆನ್ನಾಗಿರುವ ಭರವಸೆ ಇದೆ. “ನೀ ನಂಗೆ ಅಲ್ಲವಾ” ಚಿತ್ರ ಎಲ್ಲರ ಮನ ಗೆಲ್ಲಲ್ಲಿ ಎಂದು ಮೂರು ಜನ ನಟರು ಹಾರೈಸಿದರು. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ನೀ ನಂಗೆ ಅಲ್ಲವಾ” ಚಿತ್ರದ ಮೊದಲ ಹಾಡಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ. ಈಗ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ‌. “ಜಿಗಿ ಜಿಕ್ಕ ಜಿಕ್ಕ” ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಾನೇ ಬರೆದಿದ್ದೇನೆ. ಶರಣ್ ಸೊಗಸಾಗಿ ಹಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ರಾಮ್ ಕಿರಣ್ ನೃತ್ಯ ನಿರ್ದೇಶನ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ರಾಹುಲ್ ಆರ್ಕಟ್, ಐಶ್ವರ್ಯ ಸಿಂಧೋಗಿ , ಗಿರಿ ಶಿವಣ್ಣ ಅವರ ಅಭಿನಯ ಈ ಹಾಡಿನ ಹೈಲೆಟ್ ಎಂದರು ನಿರ್ದೇಶಕ ಮನೋಜ್ ಪಿ ನಡಲುಮನೆ.

ನೀ ನಂಗೆ ಅಲ್ಲವಾ

ನನಗೆ ಒಳ್ಳೆಯ ತಂಡ ಸಿಕ್ಕಿದೆ. ಈ ತಂಡದ ಜೊತೆಗೆ ಕೆಲಸ ಮಾಡಿರುವುದು ಖುಷಿಯಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಎರಡು ಹಾಡುಗಳು ಈಗ ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇನ್ನೂ ಮೂರು ಹಾಡುಗಳು ಕೂಡ ಚೆನ್ನಾಗಿದೆ. ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದಿಂದ ಹಾಡು ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರ ಕೂಡ ಇದೇ ರೀತಿ ಅದ್ದೂರಿಯಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ಹೇಳಿದರು.

ನಿರ್ದೇಶಕರು ಈ ಹಾಡಿನ ಕುರಿತು ಹೇಳಿದಾಗ ನಾನು ಇಷ್ಟು ಚೆನ್ನಾಗಿ ನೃತ್ಯ ಮಾಡುತ್ತೇನಾ? ಎಂಬ ಆತಂಕವಿತ್ತು. ಆದರೆ ನೃತ್ಯ ನಿರ್ದೇಶಕ ರಾಮ್ ಕಿರಣ್ ಮಾಸ್ಟರ್ ತುಂಬಾ ಚೆನ್ನಾಗಿ ನೃತ್ಯ ಹೇಳಿಕೊಟ್ಟರು ಎಂದರು ನಾಯಕ ರಾಹುಲ್ ಆರ್ಕಟ್.

ಈ ಹಾಡಿನಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ನಿರ್ದೇಶಕ ಮನೋಜ್ ಅವರು ನನಗೆ ಹತ್ತು ವರ್ಷಗಳ ಸ್ನೇಹಿತ. ಆದರೆ ನಾನು ಈ ಹಾಡಿನಲ್ಲಿ ಸ್ನೇಹಕ್ಕಾಗಿ ಅಭಿನಯಿಸಿಲ್ಲ. ಹಾಡು ತುಂಬಾ ಚೆನ್ನಾಗಿದೆ. ಹಾಗಾಗಿ ಅಭಿನಯಿಸಿದ್ದೇನೆ ಎಂದು ನಟಿ ಐಶ್ವರ್ಯ ಸಿಂಧೋಗಿ ಹೇಳಿದರು. ನಟ ಗಿರಿ ಶಿವಣ್ಣ ಕೂಡ ಹಾಡಿನಲ್ಲಿ ನಟಿಸಿರುವುದಕ್ಕೆ ಸಂತಸಪಟ್ಟರು.

“ಜಿಗಿ ಜಿಕ್ಕ ಜಿಕ್ಕ” ಹಾಡಿನ ಬಗ್ಗೆ ಸೂರಜ್ ಜೋಯಿಸ್ ಮಾಹಿತಿ ನೀಡಿದರು. ನಾಯಕಿ ಕಾಶಿ ಮಾ, ಚಿತ್ರದಲ್ಲಿ ನಟಿಸಿರುವ ಆರತಿ ಪಡುಬಿದ್ರಿ, ಭಾವನ, ನೃತ್ಯ ನಿರ್ದೇಶಕ ರಾಮ್ ಕಿರಣ್ ಮಾಸ್ಟರ್, ಛಾಯಾಗ್ರಾಹಕ ಉದಯ್ ಲೀಲಾ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಂಕಲನಕಾರ ನಾಗೇಂದ್ರ ಉಜ್ಜನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!