ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರು ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗ್ಪುರದ ರೇಷ್ಮಿಬಾಗ್‌ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ನಾನಾ ಪಾಟೇಕರ್ ಅವರು ದಿಕೆಯಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ. ‘ಗಡ್ಕರಿ ಸಾಹೇಬರೇ, ನನ್ನ ಜಾತಿ ಯಾವುದು ಎಂದು ನಿಮಗೆ ಗೊತ್ತೇ?’ ಎಂದು ಕೇಳಿದ್ದಾರೆ.
‘ಸಮಾಜದಲ್ಲಿ ವ್ಯಕ್ತಿಯ ಮೌಲ್ಯವನ್ನು ಜಾತಿಯಿಂದ ಅಳೆಯುವುದು ದುರದೃಷ್ಟಕರ. ಮಾನವೀಯತೆ ಬೆಳೆಸದೇ ಜಾತಿವಾದದ ಗೋಡೆ ಕುಸಿಯಲು ಸಾಧ್ಯವಿಲ್ಲ. ಮಾನವ ಜನ್ಮವೇ ನಿನ್ನ ಜಾತಿ, ಮಾನವೀಯತೆಯೇ ನಿನ್ನ ಧರ್ಮ’ ಎಂಬ ತಾಯಿಯ ಮಾತುಗಳನ್ನು ನೆನಪಿಸಿಕೊಂಡರು.
‘ಜಾತಿ ಪದ್ಧತಿಯನ್ನು ಕೊನೆಗಾಣಿಸಲು ಶಿಕ್ಷಣ ಮತ್ತು ಜಾಗೃತಿಯೇ ಏಕೈಕ ಮಾರ್ಗ’ ಎಂದು ನಾನಾ ಪಾಟೇಕರ್ ಹೇಳಿದ್ದಾರೆ.
—–





Be the first to comment