ಬಾಡಿ ಶೇಮಿಂಗ್ ವಿರುದ್ಧ ಕೀರ್ತಿ ಗರಂ

ಫಿಟ್ ಆದ ಬಳಿಕ ತಮಗೆ ಬೆಂಬಲ ಸಿಗುವ ಬದಲು ಟೀಕೆಗಳು ಎದುರಾದವು ಎಂದು  ರಾಷ್ಟ್ರ ಪ್ರಶಸ್ತಿ ವಿಜೇತ ನಟಿ  ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೀರ್ತಿ ಸುರೇಶ್ ತಮ್ಮ ಜೀವನದಲ್ಲಿ ಎದುರಿಸಿದ ಬಾಡಿ ಶೇಮಿಂಗ್‌, ಪ್ಲಾಸ್ಟಿಕ್ ಸರ್ಜರಿ ವದಂತಿ,  ಮಾನಸಿಕ ಹಿನ್ನಡೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಜಿಮ್ ವರ್ಕೌಟ್ ವಿಡಿಯೋ ಹಂಚಿಕೊಂಡಿರುವ ಅವರು ಫಿಟ್‌ನೆಸ್ ತಮ್ಮ ಜೀವನವನ್ನೇ ಬದಲಾಯಿಸಿದೆ ಎಂದು ಹೇಳಿದ್ದಾರೆ.

ಕೀರ್ತಿ ಸುರೇಶ್ ‘ಮಹಾನಟಿ’ ಸಿನಿಮಾ ಬಳಿಕ ಸಿಕ್ಕ ವಿರಾಮದಲ್ಲಿ ಫಿಟ್‌ನೆಸ್ ಕಡೆ ಗಮನ ಹರಿಸಲು ನಿರ್ಧರಿಸಿದರು.. ಕಠಿಣ ವರ್ಕೌಟ್ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದ  10 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಫಿಟ್ ಆದ ಬಳಿಕ ತಮಗೆ  ಟೀಕೆಗಳು ಎದುರಾದವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಚಿತ್ರರಂಗಕ್ಕೆ ಕಾಲಿಟ್ಟಾಗ ತಮಗೆ ಜಿಮ್ ಬಗ್ಗೆ ಆಸಕ್ತಿಯೇ ಇರಲಿಲ್ಲ. ನಾನು ತೆಳ್ಳಗಾದಾಗ ಜನರು ನನ್ನನ್ನು ವೀಕ್ ಎಂದು ಕರೆದರು. ಕೆಲವರು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದರು. ನನ್ನ ಮುಖ ಸೇರಿದಂತೆ ಎಲ್ಲವೂ ನೈಸರ್ಗಿಕವಾಗಿಯೇ ಇದೆ. ನನ್ನ ಶ್ರಮಕ್ಕೆ ಸರ್ಜರಿಯ ಟ್ಯಾಗ್ ಹಾಕಿದ್ದು ನೋವು ತಂದಿತು. ಇಂದಿಗೂ ಕೆಲವರು “ನೀವು ದಪ್ಪಗಿದ್ದಾಗ ಚೆನ್ನಾಗಿದ್ದಿರಿ” ಎಂದು ಹೇಳುತ್ತಾರೆ’ ಎಂದು ಬೇಸರ  ವ್ಯಕ್ತಪಡಿಸಿದ್ದಾರೆ.

“ನಾನು ದೈಹಿಕ ಮತ್ತು ಮಾನಸಿಕವಾಗಿ ದೊಡ್ಡ ಹಿನ್ನಡೆ ಅನುಭವಿಸಿದ್ದೇನೆ. ಆದರೆ ನಾನು ಬಿದ್ದರೂ ಮತ್ತೆ ಎದ್ದು ನಿಲ್ಲುತ್ತೇನೆ. ಸೋಲೊಪ್ಪಿಕೊಳ್ಳುವುದಿಲ್ಲ” ಎಂದು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕಾರಣವನ್ನೂ ಅವರು ಬಹಿರಂಗಪಡಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!