‘ಪೆದ್ದಿ’ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾ ಗ್ರಾಮೀಣ  ಕ್ರೀಡಾ ಕಥಾಹಂದರವನ್ನು ಒಳಗೊಂಡಿದೆ. ಚಿತ್ರದ  ಜಾನ್ವಿ ಕಪೂರ್ ಪಾತ್ರವನ್ನು ಸಿನಿಪ್ರಿಯರು ‘ರಂಗಸ್ಥಲಂ’ ಚಿತ್ರದ ಸಮಂತಾ ಪಾತ್ರಕ್ಕೆ ಹೋಲಿಸಿದ್ದಾರೆ. 2018ರಲ್ಲಿ ಬಿಡುಗಡೆಯಾದ ‘ರಂಗಸ್ಥಲಂ’ ಚಿತ್ರದ  ಸಮಂತಾ ನಟಿಸಿದ್ದ ರಾಮಲಕ್ಷ್ಮಿ ಪಾತ್ರ ಅವರ ಕರಿಯರ್‌ನ  ಗಮನಾರ್ಹ ಪಾತ್ರಗಳಲ್ಲಿ ಒಂದಾಗಿತ್ತು. ಜಾನ್ವಿ ಕಪೂರ್ ಪಾತ್ರಕ್ಕೂ ಅದೇ ರೀತಿಯ ತೂಕ ಇರಬಹುದೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಜಾನ್ವಿ ಕಪೂರ್ ಅವರ ಹಳ್ಳಿ ಹುಡುಗಿಯ ಪಾತ್ರ ಗಮನ ಸೆಳೆದಿದ್ದು, ಅವರ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾ ಬಿಡುಗಡೆ ಬಳಿಕ  ನಿಜವಾದ ಪರಿಣಾಮ ತಿಳಿಯಲಿದೆ ಎಂದು ಚಿತ್ರತಂಡ ಹೇಳಿದೆ.

‘ಪೆದ್ದಿ’ ಚಿತ್ರದಲ್ಲಿ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.  ಕರುನಾಡ ಚಕ್ರವರ್ತಿ   ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಜೂನ್ 4ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ‘ಪೆದ್ದಿ’ಯಲ್ಲಿ  ಗ್ರಾಮೀಣ ವಾತಾವರಣ, ಹಳ್ಳಿ ಸಂಸ್ಕೃತಿ ಮತ್ತು ಭಾವನಾತ್ಮಕ ಕಥಾಹಂದರ ಪ್ರಮುಖವಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!