ನಹಿ ಜ್ಞಾನೇನ ಸದೃಶಂ ಚಿತ್ರಕ್ಕೆ ಶಿಕ್ಷಕರ ಪ್ರಶಂಸೆ

ರಾಮ್ ನಿರ್ದೇಶನದ ಶಿಕ್ಷಣದ ಕುರಿತ ನಹಿ ಜ್ಞಾನ ಸದೃಶಂ ಚಿತ್ರಕ್ಕೆ ಶಿಕ್ಷಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ದೀಕ್ಷಾ ಹೈ ಸ್ಕೂಲ್ ಪ್ರಿನ್ಸಿಪಾಲ್ ಶಿಕ್ಷಕಿ ಶಾಂತಿ ಸಾಯಿ ಪ್ರಸಾದ್ ಅವರು, ಇದು ಶಿಕ್ಷಣದ ಕುರಿತು ಸಿನಿಮಾ ಆಗಿರುವ ಕಾರಣ ಈ ಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸಿದ್ದೇನೆ. ಈ ಸಿನಿಮಾದ ಮೂಲಕ ಹಲವು ವಿಷಯಗಳನ್ನು ತಿಳಿಯಬಹುದು. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳಿಗೆ ಇದು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಬೆಂಗಳೂರು ಉತ್ತರಹಳ್ಳಿಯ ಶಿಕ್ಷಕ ಸೋಮಣ್ಣ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದು ಉತ್ತಮ ಚಿತ್ರವಾಗಿದೆ. ಸಿನಿಮಾದಲ್ಲಿ ತೋರಿಸಿರುವ ಶಿಕ್ಷಕರು ಶಾಲೆಯಲ್ಲಿ ಇರುತ್ತಾರೆ. ಶಾಲೆಯಲ್ಲಿ ನಡೆಯುವ ಸನ್ನಿವೇಶಗಳನ್ನು ಉತ್ತಮವಾಗಿ ಹೇಳಲಾಗಿದೆ. ಭಾರತದ ಸಂಸ್ಕೃತಿಯ ಹಲವು ಅಂಶಗಳು ಇಲ್ಲಿವೆ. ಈ ಚಿತ್ರವನ್ನು ಶಿಕ್ಷಣಕ್ಕೆ ಉಚಿತವಾಗಿ ಮಕ್ಕಳಿಗೆ ತೋರಿಸಬೇಕು ಎಂದು ಹೇಳಿದರು.

ಶಿಕ್ಷಕಿ ಜ್ಯೋತಿ ಅವರು, ಚಿತ್ರದಲ್ಲಿ ಪೋಷಕರು, ಶಿಕ್ಷಕರು,ಮಕ್ಕಳಿಗೆ ಉತ್ತಮ ಸಂದೇಶ ಇದೆ. ಈ ಚಿತ್ರ ಉತ್ತಮ ಯಶಸ್ಸು ಪಡೆಯಲಿ ಎಂದು ಹಾರೈಸಿದರು.

ಚಿತ್ರದ ನಿರ್ದೇಶನ, ನಿರ್ಮಾಣ ರಾಮ್ ಅವರದ್ದು.
ತಾರಾಗಣದಲ್ಲಿ ರಾಮ್, ವೇದಿಕಾ, ಮಹೇಶ್, ಅಬಪಾಲಿ ಇತರರು ಇದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!