ಸದ್ಯದಲ್ಲಿಯೇ ತೆರೆಗೆ ‘ಮೂರ್ಕಲ್ ಎಸ್ಟೇಟ್’

ಥ್ರಿಲರ್ ಹಾಗೂ ಹಾರರ್ ಸಿನಿಮಾ ‘ಮೂರ್ಕಲ್ ಎಷ್ಟೇಟ್’ ಇನ್ನೇನು ತೆರೆಗೆ ಬರಲು ಸಿದ್ದತೆ ನಡೆಸಿದೆ.

ಹೊಸಬರಮೂರ್ಕಲ್ ಎಸ್ಟೇಟ್ ಹೊಸ ಪ್ರತಿಭೆಗಳೇ ಇರುವ ಅದೆಷ್ಟೋ ಸಿನಿಮಾಗಳು ತೆರೆ ಕಂಡಿವೆ. ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಸಾಮಾನ್ಯ ವಾಗಿ ಹೊಸಬರಿಗೆ ಸಿಗುವ ಕಾನ್ಸೆಪ್ಟ್ ಅಂದರೆ ಅದು ಥ್ರಿಲರ್ ಅಥವಾ ಹಾರರ್. ಇದೀಗ ಇದೇ ರೀತಿ ಹೊಸಬರ ತಂಡ ಒಂದು ಮೂರ್ಕಲ್ ಎಸ್ಟೇಟ್ ಅನ್ನುವ ಟೈಟಲ್ ಬಳಸಿಕೊಂಡು ತೆರೆಗೆ ಬರುವುದಕ್ಕೆ ರೆಡಿಯಾಗಿದೆ.

 ಇದೇ 25ಕ್ಕೆಸಿನಿಮಾ ತೆರೆಗೆ ಬರುವ ಸಾಧ್ಯತೆ :

ಭದ್ರಾವತಿ ಮೂವಿ ಮೇಕರ್ಸ್ ಬ್ಯಾನರ್‌ ನಲ್ಲಿ ಕುಮಾರ್.ಎನ್ ಭದ್ರಾವತಿ ನಿರ್ಮಾಣದಲ್ಲಿ ತಯಾರಾಗಿರುವ ಸಿನಿಮಾ ಮೂರ್ಕಲ್ ಎಸ್ಟೇಟ್. ಹೊಸ ಪ್ರತಿಭೆಗಳಾದ ಪ್ರವೀಣ್ ಮತ್ತು ಪ್ರಕೃತಿ ಅಭಿನಯಿಸಿರುವ ಈ ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸದ್ಯ ಹೊಸ ಪ್ರತಿಭೆಗಳಿಗೆ ಮಣೆಹಾಕಿರುವ ನಿರ್ದೇಶಕರು ಈ ಸಿನಿಮಾವನ್ನು ಶೀಘ್ರದಲ್ಲೇ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.

ಈಗಾಗಲೇ ಹಲಾವಾರು ಸಿನಿಮಾಗಳನ್ನು ವಿತರಣೆಮಾಡಿ ಹೆಸರು ಮಾಡಿದಂತಹ ಸಂಸ್ಥೆ ವಿಜಯ್ ಸಿನಿಮಾಸ್ ಈ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

 

 

This Article Has 1 Comment
  1. Pingback: Anonymous

Leave a Reply

Your email address will not be published. Required fields are marked *

Translate »
error: Content is protected !!