ಬಹುನಿರೀಕ್ಷಿತ ‘ರಾಮಾಯಣ: ಭಾಗ 1′ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಗಳ ಗಡಿಯನ್ನು ದಾಟಿದೆ.
ರಾಮಾಯಣ’ ಈ ವರ್ಷ ಬಿಡುಗಡೆಯಾದ ಹಲವು ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆಯನ್ನು ಹಿಂದಿಕ್ಕಿದೆ. ‘ರಾಮಾಯಣ: ಭಾಗ 1’ ಎರಡು ದಿನಗಳಲ್ಲಿ ಗಳಿಸಿದ 112.90 ಕೋಟಿ ರೂ. ಮೊತ್ತ ‘ಕಾಕ್ಟೇಲ್ 2’ – 104.53 ಕೋಟಿ ರೂ.) ಮತ್ತು ‘ರಾಜ ಶಿವಾಜಿ’ – 105.68 ಕೋಟಿ ರೂ. ಚಿತ್ರಗಳ ಒಟ್ಟು ಗಳಿಕೆಗಿಂತ ಹೆಚ್ಚಾಗಿದೆ.
‘ರಾಮಾಯಣ’, ಬಿಡುಗಡೆಯ ಮೊದಲ ದಿನ 64.85 ಕೋಟಿ ರೂ. ಗಳಿಸುವ ಮೂಲಕ ಈ ವರ್ಷದ ಎರಡನೇ ಅತಿ ದೊಡ್ಡ ಆರಂಭಿಕ ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿತು. ‘ಸ್ಯಾಕ್ನಿಲ್ಕ್’ ಸಂಸ್ಥೆಯ ಅಂದಾಜಿನ ಪ್ರಕಾರ ಈ ಚಿತ್ರ ಹಿಂದಿ ಆವೃತ್ತಿಯು 35.50 ಕೋಟಿ ರೂ., ಕನ್ನಡದಲ್ಲಿ 5.15 ಕೋಟಿ ರೂ., ತೆಲುಗಿನಲ್ಲಿ 4.75 ಕೋಟಿ ರೂ., ತಮಿಳಿನಲ್ಲಿ 1.50 ಕೋಟಿ ರೂ. ಮತ್ತು ಮಲಯಾಳಂನಲ್ಲಿ 1.15 ಕೋಟಿ ರೂ. ಗಳಿಕೆ ದಾಖಲಾಗಿದೆ.
ಬಾಲಿವುಡ್ನ ಹಲವು ಪ್ರಮುಖ ಚಿತ್ರಗಳ ಎರಡನೇ ದಿನದ ಗಳಿಕೆಗಿಂತ ‘ರಾಮಾಯಣ’ ಉತ್ತಮ ಪ್ರದರ್ಶನ ನೀಡಿದೆ. ಶುಕ್ರವಾರ 48.05 ಕೋಟಿ ರೂ. ಗಳಿಸುವ ಮೂಲಕ ‘ರಾಮಾಯಣ’ ಚಿತ್ರ ‘ಕೆಜಿಎಫ್’ ( 46.79 ಕೋಟಿ ರೂ.), ‘ಜವಾನ್’ (46.23 ಕೋಟಿ ರೂ.), ‘ವಾರ್ 2’ (45 ಕೋಟಿ ರೂ.) ಮತ್ತು ‘ಗದರ್ 2’ (43.08 ಕೋಟಿ ರೂ.) ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.
—-





Be the first to comment