ನಾಳೆ ಬಿಡುಗಡೆಯಾಗುತ್ತಿರುವ ಚಿತ್ರಗಳು

ಈ ವಾರ ತೆರೆಗೆ `6ನೇ ಮೈಲಿ’

ಶ್ರೀನಾಗಬ್ರಹ್ಮ ಕ್ರಿಯೆಷನ್ಸ್ ಲಾಂಛನದಲ್ಲಿ ಡಾ||ಬಿ.ಎಸ್.ಶೈಲೇಶ್ ಕುಮಾರ್ ಅವರು ನಿರ್ಮಿಸಿರುವ `6ನೇ ಮೈಲಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ ಫಿûಲಂಸ್ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪರಮೇಶ್ ಪಿ.ಎಂ(ಪರ್ಮಿ) ಅವರ ಛಾಯಾಗ್ರಹಣವಿದೆ. ಸಾಯಿಕಿರಣ್ ಸಂಗೀತ ನಿರ್ದೇಶನ, ಮಹೇಶ್ ರೆಡ್ಡಿ ಸಂಕಲನ, ಡಿ¥sóÀರೆಂಟ್ ಡ್ಯಾನಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ||ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.

ಈ ವಾರ ತೆರೆಗೆ `ಕುಚ್ಚಿಕು ಕಚ್ಚಿಕು’

ಶ್ರೀಚೆಲುವರಾಯಸ್ವಾಮಿ ಮೂವೀಸ್ ಲಾಂಛನದಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಕಚ್ಚಿಕು ಕುಚ್ಚಿಕು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದು ಹಿರಿಯ ನಿರ್ದೇಶಕ ದಿವಂಗತ ಡಿ.ರಾಜೇಂದ್ರಬಾಬು ಅವರ ಕೊನೆಯ ನಿರ್ದೇಶನದ ಚಿತ್ರ. ನಿರ್ದೇಶಕರೆ ಚಿತ್ರಕಥೆ ಬರೆದಿರುವ ಈ ಚಿತ್ರದ ನಾಯಕರಾಗಿ ಪ್ರವೀಣ್ ಗೌಡ ಹಾಗೂ ಜೆ.ಕೆ Œಅಭಿನಯಿಸಿದ್ದಾರೆ. ನಕ್ಷತ್ರ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಿತ್ರ, ರಮೇಶ್‍ಭಟ್, ವಿಜಯ್ ಕೌಂಡಿನ್ಯ, ಸುಂದರರಾಜ್, ಕಾರ್ತಿಕ್, ಶೈಲಜಾಜೋಶಿ, ಪವನ್ ಮುಂತಾದವರಿದ್ದಾರೆ.

ಹಂಸಲೇಖರ ಸಾಹಿತ್ಯ ಹಾಗೂ ಸಂಗೀತವಿರುವ ಈ ಚಿತ್ರಕ್ಕೆ ಎಂ.ಯು.ನಂದಕುಮಾರ್(ಜೋಗಯ್ಯ)ರ ಛಾಯಾಗ್ರಹಣವಿದೆ. ಲಕ್ಷ್ಮಣರೆಡ್ಡಿ ಸಂಕಲನ, ಜಾಲಿಬಾಸ್ಟಿನ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕಲೈ. ನಾಗೇಶ್, ಸುಧಿ ನೃತ್ಯ ನಿರ್ದೇಶನ ಹಾಗೂ ಮೋಹನ್‍ಮಾಳಗಿ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಈ ವಾರ ತೆರೆಗೆ `ಕನ್ನಡಕ್ಕಾಗಿ ಒಂದನ್ನು ಒತ್ತಿ’

ಎದಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಕನ್ನಡಕ್ಕಾಗಿ ಒಂದನ್ನು ಒತ್ತಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಗಳನ್ನು ಯೋಗರಾಜ್ ಭಟ್ ಅವರು ತಮ್ಮ ಪಂಚರಂಗಿ ಆಡಿಯೋ ಮೂಲಕ ಲೋಕಾರ್ಪಣೆ ಮಾಡಿದ್ದಾರೆ.

ಕುಶಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಿಷಿಕೇಶ್ ಅವರ ಛಾಯಾಗ್ರಹಣವಿದೆ. ಅರ್ಜುನ್ (ಕಿಟ್ಟು) ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್, ಯೋಗರಾಜ್ ಭಟ್, ಕುಶಾಲ್ ಬರೆದಿದ್ದಾರೆ. ಅವಿನಾಶ್ ಎಸ್ ಶತಮರ್ಷಣ, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಜಯಶ್ರೀ, ರಂಗಾಯಣ ರಘು, ಉಮೇಶ್, ಹೆಚ್.ಎಂ.ಟಿ ವಿಜಯ್, ರವಿ(ಟಾಮಿ) ಸತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವಾರ ತೆರೆಗೆ ` ಅಸತೋಮ ಸದ್ಗಮಯ’

ಅಸತೋಮ ಸದ್ಗಮಯ ಕನ್ನಡ ಚಲನಚಿತ್ರವು ಇದೇ ಜುಲೈ 6ರಂದು ರಾಜ್ಯಾದ್ಯಂತ ಏಕಕಾಲಕ್ಕೆ 50 ಸಿಂಗಲ್ ಸ್ಕೀನ್ ಚಿತ್ರಮಂದಿರಗಳಲ್ಲಿ ಮತ್ತು 20 ಮಲ್ಟಿಪ್ಲೆಕ್ಸ್‍ಗಳಲ್ಲಿ ಬಿಡುಗಡೆಯಾಗಲಿದೆ. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾರವರು ಈ ಚಿತ್ರವನ್ನ ನಿರ್ಮಿಸಿದ್ದು, ರಾಜೇಶ್ ವೇಣೂರ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಮೂವಿಸ್‍ರವರು ಈ ಚಿತ್ರವನ್ನ ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ.
ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯ ನಾಗರಾಜ್, ದೀಪಕ್ ಶೆಟ್ಟಿ ಹಾಗೂ ಬೇಬಿ ಚಿತ್ರಾಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನ ಪ್ರಸ್ತುತ ಜನರೇಶನ್‍ನ ಮೆಂಟಾಲಿಟಿ ಬಗ್ಗೆ ಮಾಡಲಾಗಿದ್ದು, ಸಂಬಂದಗಳು ಮತ್ತು ಬುದ್ಧಿವಂತಿಕೆ ಈ ಚಿತ್ರದ ಪ್ರಮುಖ ವಿಷಯವಾಗಿದೆ. ಜೊತೆಗೆ ಪ್ರಸ್ತುತ ಶಿಕ್ಷಣ ವ್ಯವಸ್ತೆಯ ಬಗ್ಗೆಯೂ ಈ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದ್ದು ಇದೊಂದು ಸಂಪೂರ್ಣ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಚಿತ್ರವಾಗಿದೆ.

ಈ ಚಿತ್ರಕ್ಕೆ ವಹಾಬ್ ಸಲೀಂ ಸಾಹಿತ್ಯ ಮತ್ತು ಸಂಗೀತವಿದ್ದು, ವಿಜಯ್ ಪ್ರಕಾಶ್, ಅನುರಾದ ಭಟ್, ಪದ್ಮಲತಾ, ಅಲಾಪ್ ರಾಜು ಹಾಡುಗಾರಿಕೆ ಇದೆ.
ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ವಿದ್ದು, ಕಿಶೋರ್ ಕುಮಾರ್ ಛಾಯಾಗ್ರಹಣ ಮತ್ತು ರವಿಚಂದ್ರನ್ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!