ಜೂನ್‌ ನಲ್ಲಿ ‘ಬ್ಯಾಕ್ ಬೆಂಚರ್ಸ್’ ಚಿತ್ರ ಬಿಡುಗಡೆ

ಜೂನ್‌ ನಲ್ಲಿ ಕಾಲೇಜು ಕೇಂದ್ರಿತ ‘ಬ್ಯಾಕ್ ಬೆಂಚರ್ಸ್’ ಚಿತ್ರ ಬಿಡುಗಡೆಗೆ ಚಿತ್ರತಂಡ ಯೋಜನೆ ರೂಪಿಸಿದೆ.

ನಿರ್ದೇಶಕ ಬಿಆರ್ ರಾಜಶೇಖರ್ ಬ್ಯಾಕ್ ಬೆಂಚರ್ಸ್ ಸಿನಿಮಾಗಾಗಿ ಹೊಸ ಮುಖಗಳನ್ನು ಸೇರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಕಾಮಿಡಿ ಮತ್ತು ಹೃದಯಸ್ಪರ್ಶಿ ಕಥೆಯ ಸುಳಿವು ನೀಡಿದೆ.

ಪಿಪಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ನಿರ್ದೇಶಕ-ನಟ ಅರವಿಂದ್ ಕುಪ್ಲಿಕರ್, ರಂಜನ್ ನರಸಿಂಹ ಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಗ್, ಮಾನ್ಯಾ ಗೌಡ, ಕುಂಕುಮ್, ಅನುಷಾ ಸುರೇಶ್, ಮನೋಜ್ ಶೆಟ್ಟಿ ಮತ್ತು ನಮಿತಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆ ಮತ್ತು ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ತಾಜಾ ನಿರೂಪಣೆಗಳನ್ನು ಹೆಣೆಯುವಲ್ಲಿ ಹೆಸರುವಾಸಿಯಾದ ನಿರ್ದೇಶಕ ಬಿಆರ್ ರಾಜಶೇಖರ್ ಈ ಹಿಂದೆ ತ್ರಿಕೋನ ಮತ್ತು ಬರ್ಫಿ ಚಿತ್ರಗಳನ್ನು ನಿರ್ದೇಶಿಸಿದ್ದರು.

‘ಬ್ಯಾಕ್ ಬೆಂಚರ್ಸ್’ ಚಿತ್ರಕ್ಕೆ 700 ನಟರ ಆಡಿಷನ್‌ ಮೂಲಕ ರಾಜಶೇಖರ್ ಅವರು 20 ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಶೂಟಿಂಗ್ ಆರಂಭವಾಗುವ ಮುನ್ನ ಒಂದು ವರ್ಷದ ಕಾರ್ಯಾಗಾರದ ಮೂಲಕ ನಟರ ಕೌಶಲ್ಯಗಳನ್ನು ಹೆಚ್ಚಿಸಿದ್ದಾರೆ. ರಾಜಶೇಖರ್ ಸದ್ಯ ‘ಬ್ಯಾಕ್ ಬೆಂಚರ್ಸ್’ ಬಿಡುಗಡೆಗೆ ಸಜ್ಜಾಗಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!