ಜುಲೈ 3ರಂದು ಕನ್ನಡದಲ್ಲಿ ಒಟ್ಟು ಐದು ಚಿತ್ರಗಳು ಬಿಡುಗಡೆಯಾಗಲಿವೆ.
ಕನ್ನಡದಲ್ಲಿ ‘ಗ್ರಾಮಾಯಣ’, ‘ಲವ್ ಸೀಸನ್ಸ್’, ‘ನಮ್ ಕಾಲದಲ್ಲಿ ಹಿಂಗಿರ್ಲಿಲ್ಲ ಬಿಡಿ’, ‘ಡೆಡ್ಲಿ ಕಿಲ್ಲರ್’, ‘ಅಪರಾಧಿ ನಾನಲ್ಲ’ ಚಿತ್ರಗಳು ಬಿಡುಗಡೆ ಆಗಲಿವೆ. ಇದರ ಜೊತೆಗೆ ತೆಲುಗಿನ ‘ನಾಗಬಂಧಂ’ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಲಿದೆ.
‘ಗ್ರಾಮಾಯಣ’: ವಿನಯ್ ರಾಜ್‌ಕುಮಾರ್, ಮೇಘ ಶೆಟ್ಟಿ ನಟಿಸುತ್ತಿರುವ ‘ಗ್ರಾಮಾಯಣ’ ಸಿನಿಮಾವನ್ನು ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಲವ್ ಸೀಸನ್ಸ್ʼ: ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ʻಲವ್ ಸೀಸನ್ಸ್’ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ರಾಜೇಶ್ ನಟರಂಗ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ತಾರಾಗಣವಿದೆ.
‘ನಮ್ ಕಾಲದಲ್ಲಿ ಹಿಂಗಿರ್ಲಿಲ್ಲ ಬಿಡಿ’: ಚಿತ್ರವನ್ನು ನಿರ್ದೇಶನ ಹಾಗೂ ನಿರ್ಮಾಣ ಅಮೋಘವರ್ಷ ಮಾಡಿದ್ದಾರೆ. ಜೊತೆಗೆ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಿತ್ಯ ಗೌಡ, ರಾಘು ರಾಮನಕೊಪ್ಪ ಪ್ರಮುಖ ಪಾತ್ರದಲ್ಲಿದ್ದಾರೆ.
ಡೆಡ್ಲಿ ಕಿಲ್ಲರ್: ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಡೆಡ್ಲಿ ಕಿಲ್ಲರ್. ಪ್ರಶಾಂತ್ ಟಿ.ತಂಬ್ರಳ್ಳಿಮಠ ನಿರ್ಮಿಸಿರುವ ಈ ಚಿತ್ರದಲ್ಲಿ ಸಂಭ್ರಮ ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ಅಪರಾಧಿ ನಾನಲ್ಲ: ಚಿತ್ರದಲ್ಲಿಅರ್ಜುನ್ ಕಪ್ಪಿಕಾಡ್ ಮತ್ತು ಅಮೃತ ಮೂರ್ತಿ ನಟಿಸಿದ್ದಾರೆ. ಅಜಿತ್ ಚೌಟಾ ದೇವಸ್ಯ ನಿರ್ಮಾಣದಲ್ಲಿ ಯಶಂತ್ ಕಲ್ಲಡ್ಕ ನಿರ್ದೇಶನ ಮಾಡಿದ್ದಾರೆ. ವಿಕ್ರಂ ದೇವಾಡಿಗ ಮತ್ತು ಸಂದೀಪ್ ಶೆಟ್ಟಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದಾರೆ.
—–





Be the first to comment