IFFI ಭಾರತೀಯ ಪನೋರಮಾಗೆ ‘ಪಿಲಿ ಚನ್ನೆ’ ತುಳು ಚಿತ್ರ

ಅನುಪಮ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಸಿನಿಮಾ ‘ಪಿಲಿ ಚನ್ನೆ’ 57ನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ-2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.

ಈ ಹಿಂದೆ ‘ನಡುಬೆಟ್ಟು ಅಪ್ಪಣ್ಣ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಅವರ ನಿರ್ದೇಶನದ ಎರಡನೇ ಚಿತ್ರ  ಈ ಮಹತ್ವದ ಮನ್ನಣೆ ಪಡೆದುಕೊಂಡಿದೆ. ಸಿನಿಮಾದಲ್ಲಿ ಅವರು ನಿರ್ಮಾಪಕಿ, ಕಥೆಗಾರ್ತಿ, ಚಿತ್ರಕಥೆಗಾರ್ತಿ, ಸಂಭಾಷಣೆಗಾರ್ತಿ, ನಿರ್ದೇಶಕಿ, ಗಾಯಕಿ, ವಸ್ತ್ರ ವಿನ್ಯಾಸಕಿ, ನಟಿಯಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಶಿಲ್ಪಾ ನಾಗರಾಜ್, ನವೀನ್ ಡಿ. ಪಡೀಲ್, ಅನುಪಮ ಶರಧಿ, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪ ಸನತ್ ಮತ್ತು ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಪಿಲಿ ಚನ್ನೆ’  ಸಿನಿಮಾ ಭವಿಷ್ಯ ಸಿನಿಮಾ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಚಿತ್ರಕ್ಕೆ ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ಅತಿಶಯ್ ಜೈನ್ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ, ಪಳನಿ ಡಿ. ಸೇನಾಪತಿ 5.1 ಸೌಂಡ್ ಮಿಕ್ಸಿಂಗ್ ಮಾಡಿದ್ದಾರೆ. ಭವಾನಿ ಶಂಕರ್ ಆಡ್ತಲೆ ಸಾಹಿತ್ಯ ರಚಿಸಿದ್ದಾರೆ.

—

Be the first to comment

Leave a Reply

Your email address will not be published. Required fields are marked *

Translate »
error: Content is protected !!