ಕೇವಲ 99 ರೂ.ಗೆ ಸಿನಿಮಾ!

ಪಿವಿಆರ್-ಐನಾಕ್ಸ್ ಮಲ್ಟಿಪ್ಲೆಕ್ಸ್​ ಚೈನ್​ಗಳು  ಸಿನಿಮಾ ಪ್ರೇಮಿಗಳ ದಿನದ ಪ್ರಯುಕ್ತ ಏಪ್ರಿಲ್ 19ರಂದು ಚಿತ್ರ ಪ್ರೇಮಿಗಳಿಗೆ ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ಕಲ್ಪಿಸಿವೆ.

ಸೆಪ್ಟೆಂಬರ್​ 2022ರಲ್ಲಿ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 75 ರೂಪಾಯಿ ಟಿಕೆಟ್ ಆಫರ್ ನೀಡಲಾಯಿತು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಮತ್ತೆ ಚಿತ್ರ ಪ್ರೇಮಿಗಳಿಗೆ 99 ರೂಪಾಯಿಯಲ್ಲಿ ಚಿತ್ರ ನೋಡುವ ಅವಕಾಶ ಲಭಿಸಿದೆ.

ಏಪ್ರಿಲ್ 19ರಂದು ಹಿಂದಿಯಲ್ಲಿ ‘ಲವ್ ಸೆಕ್ಸ್ ಔರ್ ದೋಖಾ’ ಹಾಗೂ ‘ದೋ ಔರ್ ದೋ ಪ್ಯಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಗಳನ್ನು ಕೇವಲ 99 ರೂಪಾಯಿಗೆ ವೀಕ್ಷಣೆ ಮಾಡಬಹುದಾಗಿದೆ.

ಸಧ್ಯ ಮಲಯಾಳಂನಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಲವ್ ಸೆಕ್ಸ್ ಔರ್ ದೋಖಾ 2’,  ವಿದ್ಯಾ ಬಾಲನ್ ಹಾಗೂ ಪ್ರತಿಕ್ ಗಾಂಧಿ ನಟನೆಯ ‘ದೋ ಔರ್ ದೋ ಪ್ಯಾರ್’ ಏಪ್ರಿಲ್ 19ರಂದು ಬಿಡುಗಡೆ ಆಗಲಿವೆ.

ಹಿಂದಿಯ ‘ಬಡೇ ಮಿಯಾ ಚೋಟೆ ಮಿಯಾ’ ಹಾಗೂ ‘ಮೈದಾನ್’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿಲ್ಲ. ಅವುಗಳಿಗೆ ಈ ಆಫರ್ ಸಹಕಾರಿ ಆಗಲಿದೆ. 3ಡಿ, ಐಮ್ಯಾಕ್ಸ್, 4ಡಿಎಕ್ಸ್​ನ ಟಿಕೆಟ್ ಬೆಲೆ 199 ರೂಪಾಯಿಯಿಂದ ಆರಂಭ ಆಗಲಿದೆ.

ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡೋದು ದುಬಾರಿ ಎಂಬುದು ಅನೇಕರ ಅಭಿಪ್ರಾಯ.  ಈ ಕಾರಣದಿಂದಲೇ ಆಗಾಗ ಮಲ್ಟಿಪ್ಲೆಕ್ಸ್​ಗಳು 99 ರೂಪಾಯಿಗೆ ಸಿನಿಮಾ ನೋಡುವ ಆಫರ್ ನೀಡುತ್ತವೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!