ಸ್ನೇಹ ಸಂಬಂಧದ ಸುತ್ತ ಹೆಣೆಯಲಾದ ‘ಲೈಫ್ ಎಲ್ಲಿಂದ ಎಲ್ಲಿಗೆ’ ಚಿತ್ರ ಸೆಪ್ಟೆಂಬರ್ 4ರಂದು ಬಿಡುಗಡೆಯಾಗಲಿದೆ.
‘ಲೈಫ್ ಎಲ್ಲಿಂದ ಎಲ್ಲಿಗೆ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಲೆನಿನ್, ಮಂಜುನಾಥ್, ಕ್ರಿಶ್, ಅರ್ಜುನ್ ಶಿವನ್, ನಾಯಕಿಯಾಗಿ ಅನು ಪ್ರೇಮ ನಟಿಸಿದ್ದಾರೆ. ಮೂವರು ಪ್ರಾಣ ಸ್ನೇಹಿತರ ಲೈಫ್ ಜರ್ನಿ ಕಥೆ ಇದಾಗಿದ್ದು, ಅವರೆಲ್ಲ ಸೇರಿ ಒಂದು ಟ್ರಿಪ್ ಹೋದಾಗ ಏನಾಗುತ್ತೆ ಎಂಬುದನ್ನು ನಿರ್ದೇಶಕ ಅರ್ಜುನ್ ಶಿವನ್ ಅವರು ಅದ್ಭುತವಾದ ಭಾವನಾತ್ಮಕ ಕಥಾಹಂದರ ಹೆಣೆದು ನಿರೂಪಿಸುತ್ತಿದ್ದಾರೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅರ್ಜುನ್ ಶಿವನ್ ಗೆ ಇದು 2ನೇ ಚಿತ್ರ. ‘ಇದೊಂದು ಸ್ನೇಹಿತರ ಜರ್ನಿ ಸಿನಿಮಾ. ಕಿರಿಕ್ ಪಾರ್ಟಿ ಥರ ಒಂದು ಫನ್ ಜರ್ನಿ.ಜೀವನದಲ್ಲಿ ಏನು ಪಡೆಯದಿದ್ದರೂ ಸ್ನೇಹಿತರು ಅಂತ ಇರಬೇಕು. ಈ ಚಿತ್ರಕ್ಕಾಗಿ ಮೈಸೂರಿನಿಂದ ಡೆಲ್ಲಿವರೆಗೆ ಸುತ್ತಾಡಿದ್ದೇವೆ. ಸ್ನೇಹಿತರ ನಡುವೆ ಇಗೋ ಇರಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದು ಅರ್ಜುನ್ ಶಿವನ್ ತಿಳಿಸಿದ್ದಾರೆ.
ವಿಪ್ರ ವೆಂಚರ್ಸ್ ಮೂಲಕ ಮುಳ್ಳೂರು ಗುರುಪ್ರಸಾದ್ ಅವರು ಚಿತ್ರ ನಿರ್ಮಿಸುತ್ತಿದ್ದಾರೆ. ಸುಮಂತ್ ಅವರ ಛಾಯಾಗ್ರಹಣ, ಮಂಜು ಸ್ವಾಮಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

—





Be the first to comment