ಕಿರಣ್ ರಾಜ್ ನಾಯಕನಾಗಿ ನಟಿಸಿರುವ ‘ಜಾಕಿ 42’ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣ ಪತ್ರ ನೀಡಿದೆ.
ಗುರುತೇಜ್ ಶೆಟ್ಟಿ ನಿರ್ದೇಶನ ಹಾಗೂ ಗೋಲ್ಡನ್ ಗೇಟ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ್ ನಿರ್ಮಾಣದ ‘ಜಾಕಿ 42 ಪೂರ್ಣಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಬರುತ್ತಿರುವ ಮೊದಲ ಭಾರತೀಯ ಚಿತ್ರ ಎನ್ನಲಾಗುತ್ತಿದೆ. . ಇದು ಕುದುರೆ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು ಫ್ಯಾಮಿಲಿ ಎಮೋಷನ್ ಚಿತ್ರದಲ್ಲಿ ಗಮನ ಸೆಳೆದಿದೆ.
ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ. ಇತ್ತೀಚಿಗೆ ‘ಟಾಕ್ಸಿಕ್’ ಚಿತ್ರದೊಂದಿಗೆ ‘ಜಾಕಿ 42’ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿದೆ.
ಕಿರಣ್ ರಾಜ್ , ಹೃತಿಕ ಶ್ರೀನಿವಾಸ್ ,ಯುಕ್ತ ಶೆಟ್ಟಿ, ರಾಜೇಂದ್ರ ಕಾರಂತ್,ಬಾಲರಾಜ್ ವಾಡೆ, ಗಿರೀಶ್ ಹೆಗ್ಡೆ ,ದೀಪಕ್ ರೈ ಅರುಣ್ ಆಚಾರ್, ಶಾಂತಲ ಕಾಮತ್ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ , ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ‘ಜಾಕಿ 42’ ಚಿತ್ರಕ್ಕಿದೆ.
—-





Be the first to comment