`ಲಂಬೋದರ’ ಚಿತ್ರದ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ

ಲೂಸ್ ಮಾದ ಯೋಗಿ ಅವರ ಹುಟ್ಟುಹಬ್ಬದ ದಿನ ಬಿಡುಗಡೆಗೊಂಡ `ಲಂಬೋದರ` ಚಿತ್ರದ ಟೀಸರ್ ಅನ್ನು ಯೂಟ್ಯುಬ್‍ನಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಹಾಸ್ಯಪ್ರಧಾನ ಈ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಯೋಗಿ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ.

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 2 Comments
  1. Pingback: Read More Here

  2. Pingback: Azure DevOps

Leave a Reply

Your email address will not be published. Required fields are marked *

Translate »
error: Content is protected !!