‘ಕೊನೆಯ ಪತ್ರ’ ಪೋಸ್ಟರ್ ಅನಾವರಣ

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ‌ತಯರಾಗುತ್ತಿರುವ ’ಕೊನೆಯಪತ್ರ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ಯುವ ನಟ ಭಾರ್ಗವ್.ಬಿ.ವಿ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಐರಾ ಮೆನನ್, ಶಬೀನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಮಾಜ‌ಸೇವಕಿ ಮಮತಾ ದೇವರಾಜ್ , ಡಾಗ್ ಸತೀಶ್  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಾಯಕ ನಿರ್ದೇಶಕ ಭಾರ್ಗವ್ ಮಾತನಾಡಿ, ‘ಕೊನೆಯ ಪತ್ರ  ಮಾಸ್ ಸಿನಿಮಾ. ಹಳ್ಳಿಯಲ್ಲಿರುವ ನರಸಾಪುರದ ನರಸಿಂಹ ಎನ್ನುವ ಪಾತ್ರ. ಮಾಸ್‌ಲುಕ್ ಇರಲಿದೆ. ಅವನಿಗೆ ಪತ್ರ ಬರುತ್ತದೆ ಅದು ನಾಯಕನ ಜೀವನದಲ್ಲಿ ಹೇಗೆಲ್ಲಾ ಬದಲಾಗುತ್ತದೆ ಎನ್ನುವುದು ಚಿತ್ರದ ಕಥೆ. ಎರಡು ಭಾಗದಲ್ಲಿ ಮೂಡಿಬರುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದ್ದು ಹೈದರಾಬಾದ್, ಬೆಂಗಳೂರು, ಮಂಗಳೂರು ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗುವುದು’ ಎಂದರು‌.

ನಿರ್ಮಾಪಕ ನಾಗರಾಜ್ ಮಾತನಾಡಿ, ‘ಕನ್ನಡ ಮತ್ತು ತೆಲುಗಿನಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.  ಭಾರ್ಗವ್ ಹೇಳಿದ ಕಥೆ ಇಷ್ಟವಾಯಿತು. ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ’ ಎಂದರು.

ಚಿತ್ರದಲ್ಲಿ ಬಲರಾಜವಾಡಿ, ಕಿಲ್ಲಿ ಕ್ರಾಂತಿ, ಚತ್ರಪತಿ ಶೇಖರ್, ಪ್ರೇಮ್ ಸಾಗರ್, ಸಾಯಿ ಕಿಶೋರ್, ಜಬರ್ ದಸ್ತ್ ನವೀನ್, ತಗುಬಾತು ಶ್ರೀನು, ಟೆಸ್ಟಿ ತೇಜ ಅಭಿನಯಿಸಿದ್ದಾರೆ.

——

 

Be the first to comment

Leave a Reply

Your email address will not be published. Required fields are marked *

Translate »
error: Content is protected !!