ಮಾಲಾಶ್ರೀ, ಭೂಮಿ ಶೆಟ್ಟಿ ನಟನೆಯ ‘ಕೆಂಡದ ಸೆರಗು’ ಚಿತ್ರ ಏಪ್ರಿಲ್ 17ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಾಕಿ ಸೋಮ್ಲಿ ನಿರ್ದೇಶಿಸಿರುವ ಕೆಂಡದ ಸೆರಗು ಚಿತ್ರವು ಸಾಮಾಜಿಕ ಸಂದೇಶದೊಂದಿಗೆ ಕ್ರೈಂ ತನಿಖೆಯ ಅಂಶವನ್ನೂ ಒಳಗೊಂಡಿದೆ. ಚಿತ್ರದಲ್ಲಿ ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಕೆಲವು ಯುವತಿಯರು ಎದುರಿಸುವ ಮೋಸ ಮತ್ತು ಅಪಾಯಗಳನ್ನೂ ತೋರಿಸಲಾಗಿದೆ.
ಕಥೆಯ ಒಂದು ಭಾಗದಲ್ಲಿ ಯುವತಿಯೊಬ್ಬಳು ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಮೋಸಕ್ಕೆ ಒಳಗಾಗುತ್ತಾಳೆ. ತಪ್ಪಾದ ವ್ಯಕ್ತಿಯ ಮೇಲೆ ನಂಬಿಕೆ ಇಡುವುದರಿಂದ ಅವಳ ಜೀವನದ ದಿಕ್ಕೇ ಬದಲಾಗುತ್ತದೆ ಮತ್ತು ಅವಳು ಅನೈತಿಕ ವಲಯದ ಜಾಲದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರು ಶಕ್ತಿಶಾಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರವೇಶಿಸಿ ಆ ರಾಕೆಟ್ ನ್ನು ಬಯಲಿಗೆಳೆಯುವ ಕಾರ್ಯಕ್ಕೆ ಮುಂದಾಗುತ್ತಾರೆ. ಅವರ ಪಾತ್ರವು ಅಪರಾಧ ಜಾಲವನ್ನು ಭೇದಿಸಿ ಸತ್ಯವನ್ನು ಹೊರತರುತ್ತದೆ.
ಈ ಚಿತ್ರವು ಮಾಲಾಶ್ರೀ ಅವರ ಪ್ರಭಾವಿ ಕಮ್‌ಬ್ಯಾಕ್ ಆಗಿದೆ. ಶ್ರೀ ಮುತ್ತು ಟಾಕೀಸ್ ಬ್ಯಾನರ್‌ನಲ್ಲಿ ಕೋಟ್ರೆಶ್ ಗೌಡ ನಿರ್ಮಿಸಿರುವ ಚಿತ್ರದಲ್ಲಿ ವಿಪಿನ್ ಛಾಯಾಗ್ರಹಣ, ವೀರೇಶ್ ಕಂಬಳಿ ಸಂಗೀತ ನಿರ್ದೇಶನ ಇದೆ.
—-





Be the first to comment