ಭಾರೀ ಸಂಚಲನ ಸೃಷ್ಟಿಸಿರುವ ಮೊನಾಲಿಸಾ ಭೋಸ್ಲೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನಿರ್ದೇಶಕ ಸನೋಜ್ ಮಿಶ್ರಾ ಘೋಷಿಸಿದ್ದಾರೆ.
ಫರ್ಮಾನ್ ಖಾನ್ ಜೊತೆ ಪ್ರೇಮ ಸಂಬಂಧದ ಬಳಿಕ ಮೊನಾಲಿಸಾ ಕೇರಳ ಪೊಲೀಸರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಈ ಮದುವೆಯನ್ನು ಸನೋಜ್ ಮಿಶ್ರಾ ಅಮಾನ್ಯ ಎಂದು ಹೇಳಿದ ನಂತರಕೇರಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಸಿನಿಮಾ ಅವಕಾಶದ ಹೆಸರಿನಲ್ಲಿ ಸನೋಜ್ ಮಿಶ್ರಾ ನನ್ನೊಂದಿಗೆ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಹೇಳಿದ್ದರು. ಈ ಪ್ರಕರಣ ಈಗ ಕಾನೂನು ಹೋರಾಟದ ಹಂತಕ್ಕೆ ತಲುಪಿದೆ.
”ಮೊನಾಲಿಸಾ ಭೋಸ್ಲೆ ಹೇಳಿಕೆಗಳು ಸಂಪೂರ್ಣ ಸುಳ್ಳು. ನಾನು ಅವರ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ಅವರ ಮದುವೆ ಅಮಾನ್ಯ ಎಂದು ಹೇಳಿದ್ದರಿಂದಲೇ ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ವಿವಾದ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸತ್ಯ ಯಾವುದು ಎಂಬುದರ ಬಗ್ಗೆ ಎಲ್ಲರೂ ಕಾದು ನೋಡುತ್ತಿದ್ದಾರೆ.
—-





Be the first to comment