kabzaa ಕಬ್ಜ ರಿಲೀಸ್ ಡೇಟ್ ಫಿಕ್ಸ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಪುನೀತ್ ರಾಜ್ ಕುಮಾರ್ ಜನ್ಮ ದಿನವಾದ ಮಾರ್ಚ್​17 ರಂದು ರಿಲೀಸ್ ಆಗಲಿದೆ.

ಅಪ್ಪು ಜನ್ಮ ದಿನಕ್ಕೆ ಈ ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಹೇಳಿದ್ದಾರೆ.

ಅಪ್ಪು ಅವರ ಜನ್ಮ ದಿನದಂದು ರಿಲೀಸ್ ಮಾಡೋ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಚಿತ್ರದ ಎಲ್ಲ ಕೆಲಸಗಳು ಭರದಿಂದ ನಡೆಯುತ್ತಿವೆ ಎಂದು ಆರ್ ಚಂದ್ರು ತಿಳಿಸಿದ್ದಾರೆ.

ಕಬ್ಜ ಚಿತ್ರ ಈಗಾಗಲೇ ತನ್ನ ಮೇಕಿಂಗ್​ನಿಂದಲೇ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಪೋಸ್ಟರ್ ಮತ್ತು ಟೀಸರ್ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕೆಜಿಎಫ್​ ರೀತಿ ಈ ಚಿತ್ರ ಇದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಉಪ್ಪಿಯ ಕಬ್ಜ ಚಿತ್ರದ ಎಲ್ಲ ಹಂತಗಳನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಸಿನಿಮಾದ ಪ್ರತಿ ವಿಷಯವನ್ನು ಆರ್.ಚಂದ್ರು ಅವರಿಂದ ತಿಳಿದುಕೊಂಡಿದ್ದರು.

ಅಪ್ಪು ಅವರ ಮೇಲಿನ ಗೌರವದಿಂದ ಆರ್ ಚಂದ್ರು ತಮ್ಮ ಕಬ್ಜ ಚಿತ್ರವನ್ನು ಪುನೀತ್ ಅವರ ಜನ್ಮ ದಿನಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ.

ಈ ವರ್ಷದ ಐಎಂಡಿಬಿ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ಕಬ್ಜ’ ಸಿನಿಮಾ ಸ್ಥಾನ ಪಡೆದುಕೊಂಡಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!