athiyashetty ಹಸೆಮಣೆ ಏರಿದ ಅಥಿಯಾ ಶೆಟ್ಟಿ – ಕೆ.ಎಲ್ ರಾಹುಲ್

ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

(ಜ.23)ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಮದುವೆ ನೆರವೇರಿದ್ದು, ಈ ಸಂಭ್ರಮಕ್ಕೆ ಬಾಲಿವುಡ್ ಚಿತ್ರರಂಗವೇ ಸಾಕ್ಷಿಯಾಗಿದೆ.

ಮದುವೆಯ ಸಂದರ್ಭದಲ್ಲಿ ಕ್ರೀಮ್ ಬಣ್ಣದ ಲೆಹೆಂಗಾದಲ್ಲಿ ಅಥಿಯಾ ಮಿಂಚಿದ್ರೆ, ಬಳಿ ಬಣ್ಣದ ಕುರ್ತಾ ರಾಹುಲ್ ಧರಿಸಿದ್ದರು.

ಈ ಜೋಡಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!