ಇತಿಹಾಸ ನಿರ್ಮಿಸಿದ ‘ಜೈಲರ್ 2’

ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರ  ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಲನಚಿತ್ರವಾಗಿ ಹೊರಹೊಮ್ಮುವ ಮೂಲಕ  ಇತಿಹಾಸ ಸೃಷ್ಟಿಸಿದೆ.

ಅಕ್ಟೋಬರ್ 26ರಂದು ‘ಜೈಲರ್ 2’ ಚಿತ್ರ  ಜಾಗತಿಕವಾಗಿ ಒಟ್ಟು 733.35 ಕೋಟಿ ಗಳಿಕೆ ಕಂಡಿದೆ. ಈ ಚಿತ್ರ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದ ‘2.0’ ಚಿತ್ರದ   ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ. ‘2.0’ ಚಿತ್ರ  691 ಕೋಟಿ ಗಳಿಸಿತ್ತು.

ಜೈಲರ್ 2 ಚಿತ್ರ  ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ  ಈ  ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಧನೆಯೊಂದಿಗೆ ‘ಜೈಲರ್ 2’ ಚಿತ್ರ 2026ನೇ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರವಾಗಿ ಹೊರಹೊಮ್ಮಿದೆ.

ಈ ಚಿತ್ರ ವಿವಿಧ ಭಾಷಾ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಜಾಗತಿಕ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಗಿದೆ. ಕೇವಲ 3 ದಿನಗಳಲ್ಲಿ  300 ಕೋಟಿ   ಮತ್ತು 4ನೇ ದಿನದಂದು 400 ಕೋಟಿ ಗಡಿಯನ್ನು ಈ ಚಿತ್ರ ತಲುಪಿದೆ.

‘ತಲೈವರ್’ (ರಜನಿಕಾಂತ್) ಅವರ ಮ್ಯಾಜಿಕ್ಕೇ ಬೇರೆ. ಜೈಲರ್ 2 ಚಿತ್ರಕ್ಕೆ ನೀವು ನೀಡಿದ ಅದ್ಭುತ ಪ್ರೀತಿ ಮತ್ತು ಸ್ವಾಗತಕ್ಕೆ ಧನ್ಯವಾದಗಳು, ಪ್ರಿಯ ಪ್ರೇಕ್ಷಕರೇ! ಪ್ರೇಕ್ಷಕರು ಈ ರೀತಿ ಸಂಭ್ರಮಿಸುವುದನ್ನು ನೋಡುವುದಕ್ಕಿಂತ ಮಿಗಿಲಾದ ಸಂತೋಷ ಬೇರೊಂದಿಲ್ಲ! ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್  ಎಕ್ಸ್ ನಲ್ಲಿ ಬರೆದಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!