ಆರನ್ ಕಾರ್ತಿಕ್ ವೆಂಕಟೇಶ್ ಅವರ ನಿರ್ದೇಶನದ ಚೊಚ್ಚಲ ಬಾಲಿವುಡ್ ಚಿತ್ರ ‘ಜಾಹಕ್ಕಾಸ್’ ಚಿತ್ರೀಕರಣ ಯಶಸ್ವಿಯಾಗಿ ನಡೆಯುತ್ತಿದೆ.
ಆರನ್ ಕಾರ್ತಿಕ್ ಮೊದಲ ಬಾರಿಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಮತ್ತು ಸಾಕಷ್ಟು ಆಕ್ಷನ್ ಹೊಂದಿರುವ ಸೂಪರ್ ಹೀರೋ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದ ನಿರ್ಮಾಪಕರು ಆರನ್ ಕಾರ್ತಿಕ್ ವೆಂಕಟೇಶ್ ಮತ್ತು ಅಣಜಿ ನಾಗರಾಜ್ ಆಗಿದ್ದಾರೆ.

ಬಾಲಿವುಡ್ ತಾರೆಯರಾದ ರಾಜು ಖೇರ್, ಫೈಸಲ್ ಖಾನ್, ಮನೋಜ್ ಮಲ್ಹೋತ್ರಾ, ಕೃತಿ ವರ್ಮಾ, ಮಿರ್ಜಾಪುರ ಖ್ಯಾತಿಯ ಸುರೇಂದರ್ ಠಾಕೂರ್, ಚೆನ್ನೈ ಎಕ್ಸ್‌ಪ್ರೆಸ್ ಖ್ಯಾತಿಯ ಅಸ್ಲಂ ಅಕ್ಬರ್ ಬಕ್ಷಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಶಾಂತ್ ನೂಲ್ಕರ್ ಮತ್ತು ರಿಯಾ ಜೈನ್ , ಯುವರಾಜ್ ಮತ್ತು ಮಿಶ್ತಿ ಅವರನ್ನು ಹೊಸ ಮುಖಗಳಾಗಿ ಪರಿಚಯಿಸಲಾಗಿದೆ.
ನಕಾರಾತ್ಮಕ ಪಾತ್ರಗಳಲ್ಲಿ ಆಮಿರ್ ಖಾನ್ ಅವರ ಸಹೋದರ ಫೈಸಲ್ ಖಾನ್, “ನಂಗು ಲವ್ ಆಗಿದೇ” ಚಿತ್ರದಲ್ಲಿ ನಾಯಕನಾಗಿ ನಟಿಸಿದ ಸೋಮ ವಿಜಯ್ ಮತ್ತು ಸೂರಜ್ ನಟಿಸಿದ್ದಾರೆ.
ಇತರ ಪ್ರಮುಖ ಪಾತ್ರಗಳಲ್ಲಿ ಈ ಹಿಂದೆ ಲೇಡೀಸ್ ಬಾರ್ ನಿರ್ಮಿಸಿದ್ದ ಸೋಮರಾಜು, ‘ ನಂಗು ಲವ್ ಆಗಿದೇ’ ನಿರ್ಮಿಸಿದ್ದ ನೀಲಕಂಠನ್, ಕಿಟ್ಟಿ ತಾಳಿಕೋಟೆ ಮತ್ತು ಶಿವಮೊಗ್ಗ ರಾಮಣ್ಣ ನಟಿಸಿದ್ದಾರೆ.






Be the first to comment