ತಾಂತ್ರಿಕ ಅಡಚಣೆಗಳು ನಿವಾರಣೆಯಾದ ಬಳಿಕ ಬಿಡುಗಡೆಯಾದ ಬಾಲಿವುಡ್ ಬಿಗ್ ಬಜೆಟ್ ಸಿನಿಮಾ ‘ಧುರಂಧರ್ 2’ ಚಿತ್ರದ ಕನ್ನಡ ಆವೃತ್ತಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮಾರ್ಚ್ 19ರಂದು ಹಿಂದಿ ಆವೃತ್ತಿ ವಿಶ್ವದಾದ್ಯಂತ ಬಿಡುಗಡೆಯಾದರೂ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಡಬ್ಬಿಂಗ್ ಆವೃತ್ತಿಗಳು ಅದೇ ದಿನ ತೆರೆಗೆ ಬರಲಿಲ್ಲ. ಪ್ರಾದೇಶಿಕ ಭಾಷೆಗಳ ಸೆನ್ಸಾರ್ ವಿಳಂಬ, ಡಬ್ಬಿಂಗ್ ಪ್ರಕ್ರಿಯೆಯ ಅಂತಿಮ ಹಂತದ ಕೆಲಸಗಳು ಪೂರ್ಣಗೊಳ್ಳದಿದ್ದು ಡಿಜಿಟಲ್ ಕಂಟೆಂಟ್ ಚಿತ್ರಮಂದಿರಗಳಿಗೆ ತಲುಪುವಲ್ಲಿ ಉಂಟಾದ ತೊಂದರೆಗಳಿಂದ ಕನ್ನಡ ಆವೃತ್ತಿ ಬಿಡುಗಡೆ ಮುಂದೂಡಬೇಕಾಯಿತು. ಇದೀಗ ‘ಧುರಂಧರ್ 2’ ರಾಜ್ಯದಲ್ಲಿ ಯಶಸ್ವಿಯಾಗಿ ಓಡುತ್ತಿದೆ.
ಬಿಡುಗಡೆಯಾದ ಕನ್ನಡ ಆವೃತ್ತಿಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ. ಚಿತ್ರದ ಮೇಕಿಂಗ್ ಮತ್ತು ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.
ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಸಾರಾ ಅರ್ಜುನ್, ಮಾಧವನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಿಶ್ರ ವಿಮರ್ಶೆಗಳ ನಡುವೆಯೂ ‘ಧುರಂಧರ್ 2’ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ.
—–





Be the first to comment