‘ಧುರಂಧರ್: ದಿ ರಿವೆಂಜ್’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಸ್ಟಾರ್‌ಗಳನ್ನು ಮೀರಿಸಿ IMDb ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ನಂ.1 ಸ್ಥಾನ ಪಡೆದಿದ್ದಾರೆ.
ಈ ವಾರದ ಪಟ್ಟಿಯಲ್ಲಿ‘ಧುರಂಧರ್2′ ಚಿತ್ರದ ತಂಡವೇ ಮೇಲುಗೈ ಸಾಧಿಸಿದೆ. ನಿರ್ದೇಶಕ ಆದಿತ್ಯ ಧರ್ ಮೊದಲ ಸ್ಥಾನಕ್ಕೇರಿರುವುದು ‘ಧುರಂಧರ್ 2’ ಚಿತ್ರದ ಕಥಾ ನಿರೂಪಣೆ, ತಾಂತ್ರಿಕ ಮೆರಗು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವುದಕ್ಕೆ ಸಾಕ್ಷಿಯಾಗಿದೆ.
IMDb ಪಟ್ಟಿಯಲ್ಲಿ ‘ಧುರಂಧರ್ 2’ ತಂಡದ ಆದಿತ್ಯ ಧರ್ – 1ನೇ ಸ್ಥಾನ, ಸಾರಾ ಅರ್ಜುನ್ – 2ನೇ ಸ್ಥಾನ, ರಣವೀರ್ ಸಿಂಗ್ – 3ನೇ ಸ್ಥಾನ, ಉದಯ್‌ಬೀರ್ ಸಂಧು – 7ನೇ ಸ್ಥಾನ, ಅರ್ಜುನ್ ರಾಮ್ಪಾಲ್ – 9ನೇ ಸ್ಥಾನ, ಸೌಮ್ಯಾ ಟಂಡನ್ – 10ನೇ ಸ್ಥಾನ, ಗೌರವ್ ಗೇರಾ – 12ನೇ ಸ್ಥಾನ, ಡ್ಯಾನಿಶ್ ಇಕ್ಬಾಲ್ – 13ನೇ ಸ್ಥಾನ, ರಾಕೇಶ್ ಬೇಡಿ – 20ನೇ ಸ್ಥಾನ ಪಡೆದಿದ್ದಾರೆ.
ಚಿತ್ರದ ಮೊದಲ ಭಾಗದಲ್ಲಿ ನಟಿಸಿದ್ದ ಅನಾಸ್ವರ ರಾಜನ್ 6ನೇ ಸ್ಥಾನ, ಜತಿನ್ ಗೋಸ್ವಾಮಿ 14ನೇ ಸ್ಥಾನ, ಅಕ್ಷಯ್ ಖನ್ನಾ 16ನೇ ಸ್ಥಾನ ಪಡೆದಿದ್ದಾರೆ.
ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಈಗಾಗಲೇ ಭಾರತದಲ್ಲಿ 450 ಕೋಟಿ ರೂಪಾಯಿ ಹಾಗೂ ಜಾಗತಿಕ ಮಟ್ಟದಲ್ಲಿ 750 ಕೋಟಿ ರೂಪಾಯಿ ಭರ್ಜರಿ ಗಳಿಕೆ ಮಾಡಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ ಚಿತ್ರದ IMDb ಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ.
—–





Be the first to comment