‘ರಮ್ಯಾ ಕಾಂಗ್ರೆಸ್ಸಿನ ಚಿಯರ್‌ ಲೀಡರ್!’

‘ರಮ್ಯಾ ನಟಿಯ ವೇಷ ಧರಿಸಿದ ಕಾಂಗ್ರೆಸ್ಸಿನ ಚಿಯರ್‌ಲೀಡರ್ ‘ ಎಂದು ನಿರ್ಮಾಪಕ ಪ್ರಶಾಂತ್ ಸಂಬರಗಿ ಲೇವಡಿ ಮಾಡಿದ್ದಾರೆ.

‘ರಮ್ಯಾ ಅವರೇ, ನೀವು ಸಿನಿಮಾ ತಜ್ಞರಲ್ಲ. ಒಬ್ಬ ಸಿನಿಮಾ ವಿತರಕನಾಗಿ, ನಿರ್ಮಾಪಕನಾಗಿ,  ದೊಡ್ಡ ಸ್ಟುಡಿಯೋ ಮತ್ತು ರೇಡಿಯೋ ಸ್ಟೇಷನ್‌ಗಳಲ್ಲಿ ಕೆಲಸ ಮಾಡಿದ ಅನುಭವಿ ವ್ಯಕ್ತಿಯಾಗಿ, ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಒಬ್ಬ ಇಂಡಸ್ಟ್ರಿ ವ್ಯಕ್ತಿಯಾಗಿ ‘ಧುರಂಧರ್ 2’ ಬಗ್ಗೆ ನೀವು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಟೀಕೆಗೆ ನಾನು ಉತ್ತರ ಕೊಡಲೇಬೇಕಿದೆ. ಯಾಕೆಂದರೆ ನನ್ನ ರಕ್ತ ಕುದಿಯುತ್ತಿದೆ. ನಿಮಗೆ ಇದೊಂದು ‘ವೇಕ್-ಅಪ್ ಕಾಲ್’. ನಿಮ್ಮ ಅಭಿಪ್ರಾಯಗಳು ರಾಜಕೀಯ ಪ್ರಭಾವದಿಂದ ಪ್ರೇರಿತವಾಗಿದ್ದು, ನೀವು ಸಿನಿಮಾವನ್ನು ಒಬ್ಬ ಪ್ರೇಕ್ಷಕಿಯಾಗಿ ನೋಡುತ್ತಿಲ್ಲ. ಬದಲಾಗಿ ಕಾಂಗ್ರೆಸ್‌ನ ಚಿಯರ್ ಲೀಡರ್ ಆಗಿ ನೋಡಿದ್ದೀರಿ ಎಂದು ಹೇಳಿದ್ದಾರೆ.

ನೀವು 2019ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಂದ ನಂತರ ಅದು ನರಕವಲ್ಲ, ಸ್ವರ್ಗ ಎಂದು ಈ ಹಿಂದೆ ಹೇಳಿಕೆ ನೀಡಿದ್ದೀರಿ. ಇತ್ತೀಚಿನ ಗ್ಲೋಬಲ್ ಟೆರರಿಸಂ ಇಂಡೆಕ್ಸ್ ಪ್ರಕಾರ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದೆ. ‘ಧುರಂಧರ್ 2 ಇಂತಹ  ಅಪಾಯದ ಆಧಾರದ ಮೇಲೆ ನಿರ್ಮಾಣವಾದ ಸಿನಿಮಾ. ಚಿತ್ರ ಬಿಡುಗಡೆಯಾದ ನಂತರ ಅದನ್ನು ತಿರಸ್ಕರಿಸಿದವರು ನೀವೊಬ್ಬರೇ ಅಲ್ಲ. ನಿಮ್ಮಂತಹ ರಾಜಕೀಯ ಮನೋಭಾವ ಹೊಂದಿದ ಹಲವರು ಇದೇ ರೀತಿ ಪ್ರತಿಕ್ರಿಯಿಸಿದ್ದಾರೆ. ನೀವು ಸ್ವಲ್ಪ ತಡವಾಗಿ ಸೇರಿದ್ದೀರಷ್ಟೆ ಎಂದು ಬರೆದುಕೊಂಡಿದ್ದಾರೆ.

‘ಧುರಂಧರ್ 2’ ಸಿನಿಮಾದಲ್ಲಿರೋ ಒಂದು ಪಾತ್ರ, ಒಂದು ಸೀನ್ ಅಥವಾ ಯಾವುದಾದರೂ ಒಂದು ವಿಷಯ ತಪ್ಪು ಅಥವಾ ಸುಳ್ಳು ಅಂತ ಬೆರಳು ಮಾಡಿ ತೋರಿಸಿ ನೋಡೋಣ? ನಾನೂ ನಿಮ್ಮ ಹಾಗೆ ಚಿತ್ರರಂಗದವನೇ. ನಿಮಗೆ ಇದು ನನ್ನದೊಂದು ಸವಾಲು. ಕಾಂಗ್ರೆಸ್‌ನ ತುಷ್ಟೀಕರಣ ನೀತಿಗಳು ಬಹಳ ಹಿಂದಿನಿಂದಲೂ ರಾಷ್ಟ್ರೀಯತೆಯನ್ನು ಬದಿಗಿಟ್ಟಿವೆ. ಧುರಂಧರ್ 2 ಭಾರತೀಯ ಮುಸ್ಲಿಮರ ಬಗ್ಗೆ ಅಲ್ಲ. ಪಾಕಿಸ್ತಾನಿ ಮುಸ್ಲಿಮರ ಬಗ್ಗೆ ಮಾತನಾಡುತ್ತದೆ. ಭಾರತದಲ್ಲಿ ನಿಜವಾದ ಜಾತ್ಯತೀತತೆ ಸತ್ಯಗಳನ್ನು ಎದುರಿಸುವುದನ್ನು ಬಯಸುತ್ತದೆ. ಆಯ್ದ ಆಕ್ರೋಶವನ್ನಲ್ಲ. ಜಾತ್ಯತೀತ ಹಿಂದೂ ಆಗಿರುವುದು ಭಾರತದಲ್ಲಿ ಒಂದು ರೋಗ. ಅದಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆಯಿರಿ. ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ. Get well soon ರಮ್ಯಾ ಎಂದು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!