ಬಿಗ್ ಬಾಸ್ ವಿನ್ನರ್ ಗಿಲ್ಲಿ ಫಿಟ್ ನೆಸ್ ವಿಡಿಯೋ ಹಂಚಿಕೊಳ್ಳುವ ಮೂಲಕ ಹೊಸ ಅವತಾರ ಅನಾವರಣ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಚಡ್ಡಿ, ಬನಿಯಾನ್ ನಲ್ಲಿ ಅಡ್ಡಾಡುತ್ತಿದ್ದ ಗಿಲ್ಲಿ ಈಗ ಬದಲಾವಣೆಗೆ ತೆರೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಘು ನೀಡಿದ ವರ್ಕ್ ಔಟ್ ಸಲಹೆಯನ್ನು ಗಿಲ್ಲಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಟ್ರೈನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕ್ ಔಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು ಈ ವೀಡಿಯೊ ವೈರಲ್ ಆಗಿದೆ.
ಫಿಟ್ ನೆಸ್ ಕಡೆಗೆ ಗಮನ ಹರಿಸಿರುವ ಗಿಲ್ಲಿ ಅವರ ನಡೆಯನ್ನು ಕಂಡು ಅಭಿಮಾನಿಗಳು ನಾನಾ ಕಮೆಂಟ್ ಮಾಡುತ್ತಿದ್ದಾರೆ. ಗಿಲ್ಲಿ ನಟನೆ ಕಡೆಗೆ ಗಮನ ಹರಿಸುತ್ತಿದ್ದಾರೆಯೇ ಎಂದು ಮಾತನಾಡುತ್ತಿದ್ದಾರೆ.
ಗಿಲ್ಲಿ ನಿರ್ದೇಶನದ ಕಡೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆದರೆ ಫಿಟ್ ನೆಸ್ ಕಸರತ್ತು ಕಂಡು ಗಿಲ್ಲಿ ಹೀರೋ ಆಗಲು ಹೊರಟಿದ್ದಾರೆಯೇ ಎಂದು ಕಮೆಂಟ್ ಮಾಡುತ್ತಿದ್ದಾರೆ.
—





Be the first to comment