ಸಮಸ್ಯೆಯ ಸುಳಿಯಲ್ಲಿ ‘ ಮಾತೃಭೂಮಿ ‘

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಮೇಕಿಂಗ್ ಆಗದೇ ಇರುವ ಕಾರಣ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಪ್ರತಿ ಈದ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾ ಗಿಫ್ಟ್ ಮಾಡುತ್ತಿದ್ದ ಸಲ್ಮಾನ್ ಖಾನ್ ಈ ಬಾರಿ ಎಡವಿದಂತೆ ಕಾಣುತ್ತಿದ್ದಾರೆ. ಈ ಮೊದಲು ‘ಗಾಲ್ವನ್’ ಎಂಬ ಟೈಟಲ್ ಘೋಷಿಸಲಾಗಿತ್ತು. ನಂತರ ಟೈಟಲ್ ‘ಮಾತೃಭೂಮಿ’ ಎಂದು ಬದಲಾಯಿತು.  ‘ಮಾತೃಭೂಮಿ’ ಚಿತ್ರ  ಏಪ್ರಿಲ್ 17ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಬಿಡುಗಡೆ ದಿನಾಂಕವನ್ನು ಮೇ 15ಕ್ಕೆ ಮುಂದೂಡಲಾಯಿತು. ಹೊಸ ಮಾಹಿತಿಯ ಪ್ರಕಾರ ಈ ಚಿತ್ರ ಆಗಸ್ಟ್ 14ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಚಿತ್ರದ ಟೀಸರ್ ಮತ್ತು ಮೂರು ಹಾಡುಗಳು ಬಿಡುಗಡೆಯಾಗಿವೆ. ಆದರೆ ಹಲವು ದೃಶ್ಯಗಳನ್ನು ರೀ ಶೂಟಿಂಗ್ ಮಾಡಲಾಗುತ್ತಿದೆ. ಎಮೋಷನಲ್ ಕನೆಕ್ಟ್ ಆಗದೇ ಇರುವ ಕಾರಣ ಚಿತ್ರತಂಡ ಭಾವನಾತ್ಮಕ ಅಂಶಗಳನ್ನು ಬಲಪಡಿಸಲು ಮತ್ತೆ ಶೂಟಿಂಗ್ ಕಸರತ್ತು ಮಾಡುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಈ ಚಿತ್ರ ಸಲ್ಮಾನ್ ಖಾನ್ ಅವರ ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿದೆ. ಹಲವು ಸಿನಿಮಾಗಳ ಸೋಲಿನಿಂದ ಒತ್ತಡದಲ್ಲಿರುವ ಸಲ್ಮಾನ್ ಖಾನ್ ಈ ಚಿತ್ರ ಸೋತಲ್ಲಿ ನೇರವಾಗಿ ನಷ್ಟ ಅನುಭವಿಸಲಿದ್ದಾರೆ.

ಮಾತೃಭೂಮಿ ಚಿತ್ರದ ಕಥೆ 2020 ರ ಜೂನ್ 15ರಂದು ಭಾರತ ಮತ್ತು ಚೀನಾ ಗಡಿ ಬಳಿ ನಡೆದ ಘರ್ಷಣೆಯ ಘಟನೆಯನ್ನು ಹೊಂದಿದೆ. ಈ ಸಂಘರ್ಷದಲ್ಲಿ ಭಾರತದ ಇಪ್ಪತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಚೀನಾ ಸೈನಿಕರು ಗಡಿ ಒಪ್ಪಂದ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು. ಭಾರತೀಯ ಯೋಧರ ಸಾಹಸದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲು ಯತ್ನಿಸಲಾಗಿದೆ.

ದೇಶ ಪ್ರೇಮದ ಕಥೆಯುಳ್ಳ ಈ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂದು ಕಾದು ನೋಡಬೇಕಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!