ಯಶ್ ಲುಕ್ ರಿವೀಲ್ ಆಗದ್ದಕ್ಕೆ ಬೇಸರ

‘ರಾಮಾಯಣ’ ಚಿತ್ರದ ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಪಾತ್ರದ ಲುಕ್ ಪೂರ್ಣವಾಗಿ ರಿವೀಲ್ ಆಗದೆ ಇರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಬಿಡುಗಡೆ ಆಗಿರುವುದು ಟೀಸರ್ ಮಾತ್ರ. ಇಲ್ಲಿ ಏನು ತೋರಿಸಬೇಕು ಅಷ್ಟೇ ತೋರಿಸಲಾಗುತ್ತದೆ. ಕುತೂಹಲ ಉಳಿಸಲು ಈ ರೀತಿ ಮಾಡಿರಬಹುದು. ಮಗ ಪೌರಾಣಿಕ ಪಾತ್ರ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ಇನ್ನೂ ಹೆಚ್ಚಾಗಿ ಈ ರೀತಿಯ ಪಾತ್ರಗಳನ್ನು ಮಾಡಲಿ”ಎಂದು ಆಶಿಸಿದ್ದಾರೆ.

“ಯಶ್ ಚಿಕ್ಕವನಿದ್ದಾಗ ಪಕ್ಕದ ಮನೆಗೆ ಹೋಗಿ ರಾಮಾಯಣ ಧಾರಾವಾಹಿ ನೋಡುತ್ತಿದ್ದ. ಈಗ ಅವನೇ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರವನ್ನು ಮಾಡುತ್ತಿದ್ದಾನೆ. ಇದು ನಿಜಕ್ಕೂ ಖುಷಿಯ ವಿಚಾರವಾಗಿದೆ” ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಟೀಸರ್ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ನಿರೀಕ್ಷೆಯ ಮಟ್ಟದಲ್ಲಿ ಟೀಸರ್ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.

‘ರಾಮಾಯಣ’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣವೀರ್ ಕಪೂರ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಬಹಳ ದೊಡ್ಡ ಬಜೆಟಿನ ರಾಮಾಯಣ ಚಿತ್ರ ಈ ವರ್ಷದ ದೀಪಾವಳಿಯಂದು ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!