ಯಶ್‌ಗೆ 100 ಕೋಟಿ ಸಂಭಾವನೆ!

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ‘ರಾಮಾಯಣ’ದ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಒಟ್ಟು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಪ್ರತಿ ಅಧ್ಯಾಯಕ್ಕೆ ಯಶ್ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣ್‌ಬೀರ್ ಕಪೂರ್ ಮೊದಲ ಅಧ್ಯಾಯಕ್ಕೆ 75 ಕೋಟಿ, ಎರಡನೇ ಅಧ್ಯಾಯಕ್ಕೂ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಪ್ರತಿ ಅಧ್ಯಾಯಕ್ಕೆ 6 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ ಡಿಯೋಲ್ ಒಟ್ಟು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿರುವ ರವಿ ದುಬೆ 2 ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

4 ಸಾವಿರ ಕೋಟಿ ವೆಚ್ಚದ ‘ರಾಮಾಯಣ’ ಸಿನಿಮಾ  ಬಜೆಟ್, ಸ್ಟಾರ್ ಕಾಸ್ಟ್ ಮತ್ತು ಸಂಭಾವನೆಗಳಿಂದ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿರುವ ‘ರಾಮಾಯಣ’ ಪೌರಾಣಿಕ ಚಿತ್ರ ಈಗಾಗಲೇ  ಟೀಸರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕೆಲವರಿಗೆ ಟೀಸರ್ ತುಂಬಾ ಇಷ್ಟ ಆಗಿದ್ದರೆ,  ಕೆಲವರು ಎಐ ಬಳಸಿ ಟೀಸರ್ ಮಾಡಿದ್ದಾರೆ. ಡೀಟೇಲಿಂಗ್ ಮಿಸ್ ಆಗಿದೆ ಎಂದು ಟೀಕೆ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!