ಮಗನ ಹೆಸರು ರಿವೀಲ್ ಮಾಡಿದ ಡಾಲಿ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ತಮ್ಮ ಮಗನ ಹೆಸರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಡಾಲಿ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದ ನಕ್ಷೆಯ ಮಧ್ಯೆ ಮಗನ ಹೆಸರು ಇರುವ ಡಾಲರ್‌ನ್ನು ಮಾಡಿಸಿ ಅದರ ಮೂಲಕ ಮಗನ ಹೆಸರನ್ನು ಡಾಲಿ ದಂಪತಿ ಪರಿಚಯಿಸಿದ್ದಾರೆ.

”‘ಎರೆಯ’ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದಲ್ಲೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ‘ಎರೆಯ’ ಎಂದಾಗಿತ್ತು ಎನ್ನಲಾಗುತ್ತದೆ. ಈ ಹಿನ್ನೆಲೆ ಪಾರಂಪರಿಕ ಹಾಗೂ ಶಕ್ತಿಯುತ ಅರ್ಥವನ್ನು ಹೊಂದಿರುವ ಹೆಸರನ್ನು ಮಗನಿಗೆ ಇಡಲಾಗಿದೆ. ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ಎರೆಯ” ಎಂದು ಡಾಲಿ  ಮಗನ ಹೆಸರನ್ನು ಪರಿಚಯಿಸಿದ್ದಾರೆ.

ಕಳೆದ ವರ್ಷ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಹಾಗೂ ಧನ್ಯತಾ  ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ  ಪೋಷಕರಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!