ಡಿವೋರ್ಸ್ ಬಗ್ಗೆ ಸೂಕ್ತ ಸಮಯ ಸಂದರ್ಭ ಬಂದಾಗ ಅಪ್‌ಡೇಟ್ ಹಂಚಿಕೊಳ್ಳುತ್ತೇನೆ ಎಂದು ನಟಿ ಶುಭಾ ಪೂಂಜಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
2022ರಲ್ಲಿ ಗೆಳೆಯ ಸುಮಂತ್ ಬಿಲ್ಲವ್ ಅವರನ್ನು ವಿವಾಹವಾಗಿದ್ದ ಶುಭಾ ಪೂಂಜಾ ಪತಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದರಿಂದ ವಿಚ್ಛೇದನದ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು. ಈ ಬೆಳವಣಿಗೆಗಳ ನಡುವೆ ಶುಭಾ ಪೂಂಜಾ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ನನ್ನ ಚಿತ್ರಜೀವನದ ಪಯಣದಲ್ಲಿ ಮಾಧ್ಯಮ ಮಿತ್ರರು ಮತ್ತು ಅಭಿಮಾನಿಗಳು ನೀಡಿದ ಪ್ರೀತಿ, ಬೆಂಬಲಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಆದರೆ ಈ ಸಮಯದಲ್ಲಿ ನನಗೆ, ಸುಮಂತ್‌ಗೆ ಮತ್ತು ನಮ್ಮ ಕುಟುಂಬದವರಿಗೆ ಸ್ವಲ್ಪ ಖಾಸಗಿತನ ನೀಡುವಂತೆ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಸರಿಯಾದ ಸಮಯ ಬಂದಾಗ ಯಾವುದೇ ಬೆಳವಣಿಗೆ ಇದ್ದರೆ ನಾನೇ ಸ್ವತಃ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಗೌರವ ಮತ್ತು ತಿಳುವಳಿಕೆ ನಮಗೆ ಅತ್ಯಂತ ಮುಖ್ಯ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪರಸ್ಪರ ವಿಚ್ಛೇದನ ಕೋರಿ ದಂಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರೂ, ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ನಿಗದಿಯಾಗಿದ್ದ ವಿಚಾರಣೆಗೆ ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಇಬ್ಬರೂ ಹಾಜರಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಕಾರಣದಿಂದ ದಂಪತಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿದ್ದಾರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ಬಿಲ್ಲವ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.






Be the first to comment