ಗೊಲ್ಮಾಲ್ ಗ್ಯಾಂಗ್

ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಟೀಸರ್ ರಿಲೀಸ್

ಸಿನಿಮಾ ಅಂದ್ರೆನೆ ಮನರಂಜನೆ. ಆ ಮನರಂಜನೆಗಾಗಿಯೇ ಜನ ಕಾಯ್ತಾ ಇರುತ್ತಾರೆ. ನಕ್ಕು ಮನಸ್ಸನ್ನ ಕೂಲ್ ಆಗಿಸಿಕೊಳ್ಳುವಂತ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದರ ಹೆಸರೇ ಗೊಲ್ಮಾಲ್ ಗ್ಯಾಂಗ್. ಇದೀಗ ಒಂದೊಳ್ಳೆ ಟೀಸರ್ ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಭರವಸೆ ಮೂಡಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ ಬ್ಯಾನರ್ ನಡಿ ಸತೀಶ್ ಚಂದ್ರ ಅವರು ನಿರ್ಮಾಣ ಮಾಡಿದ್ದಾರೆ.

ನಿರ್ದೇಶಕ ಶಿವಕುಮಾರ್ ಮಾತನ್ನಾಡುತ್ತಾ, ಈ ಸಿನಿಮಾಗೆ ನಿರ್ಮಾಪಕರು ಬಹಳಷ್ಟು ಹೆಲ್ಪ್ ಮಾಡಿದ್ದಾರೆ. ಪ್ರತಿಯೊಂದಕ್ಕೂ ಬೆನ್ನೆಲುಬಾಗಿ ನಿಂತವರು, ತಪ್ಪು ಮಾಡಿದಾಗ ತಿದ್ದಿದವರು. ಈ ಸಿನಿಮಾದಲ್ಲಿ ಏನಿಲ್ಲ ಅಂದ್ರು 16 ಜನ ಕಲಾವಿದರಿದ್ದಾರೆ. ಆ ಎಲ್ಲಾ ಪಾತ್ರಕ್ಕೂ ಜೀವವಿದೆ. ನಾವೆಷ್ಟೇ ಬಡಿದುಕೊಂಡರು ಕಲಾವಿದರಿಲ್ಲದೆ ಏನು ಮಾಡುವುದಕ್ಕೆ ಆಗಲ್ಲ. ಕಾರ್ತಿಕ್ ರುವಾರಿ ನನ್ನನ್ನ ಬ್ರದರ್ ಆಗಿನೇ ಟ್ರೀಟ್ ಮಾಡಿದ್ರು. ಗೋಲ್ಮಾಲ್ ಮಾಡಯವಂತ ಕ್ಯಾರೆಕ್ಟರ್ ಜಾಸ್ತಿ. ಅದಕ್ಕೆ ಆ ಟೈಟಲ್ ಇಟ್ಟಿದ್ದು ಎಂದಿದ್ದಾರೆ.

ಗೊಲ್ಮಾಲ್ ಗ್ಯಾಂಗ್

ನಿರ್ಮಾಪಕ ಕೆ ಸತೀಶ್ ಚಂದ್ರ ಎಲೆಕೆರೆ ಮಾತನ್ನಾಡಿ, ಶೂಟಿಂಗ್ ಸೆಟ್ ನಲ್ಲಿ ಕೆಲಸ ಮಾಡುವಾಗಲೂ ಎಲ್ಲರೂ ಒಟ್ಟಿಗೆ ಚರ್ಚೆ ಮಾಡ್ತಾ ಇದ್ವಿ. ಸಿನಿಮಾವನ್ನ ಗೆದ್ದೇ ಗೆಲ್ತೀವಿ ಅಂತ ಬಂದಿದ್ದೀವಿ. 26-27 ವರ್ಷದಿಂದ ಇಂಡಸ್ಟ್ರಿಗೆ ಲೇಬರ್ ಸಪ್ಲೈ ಮಾಡ್ತಾ ಇದ್ದೀವಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಬರಲಿಲ್ಲ. ನಿರುದ್ಯೋಗದ ಸಮಸ್ಯೆ ಕಂಡಾಗ ಏನಾದರೂ ಮಾಡಬೇಕು ಅಂತ ಹೊರಟಿದ್ದು. ಒಂದು ಬ್ಯಾನರ್ ಶುರು ಮಾಡಿ, ಕೆಲಸ ಕೊಡಬೇಕು ಅಂತ ಆರಂಭಿಸಿದೆವು ಎಂದರು.

ನಾಯಕ ನಟ ಕಾರ್ತಿಕ್ ಮಾತನ್ನಾಡಿ, ನಿರ್ದೇಶಕ ಶಿವು ಸರ್ ಕಡೆಯಿಂದ ನಿರ್ಮಾಪಕರ ಪರಿಚಯ ಆಯ್ತು. ಅವರಿಗೆ ಎಳೆ ಮಕ್ಕಳಿಗೆ ಇರುವ ಸ್ಪಿರಿಟ್ ಇದೆ. ಹೀರೋ ನಾನು ಅಂದಾಗ ಕೆಲವು ಹೀರೋಯಿನ್ ಗಳು ಒಪ್ಪಲಿಲ್ಲ. ಶಾರ್ಟ್ ಫಿಲ್ಮ್ ಅವರ ಜೊತೆಗೆ ಮಾಡಲ್ಲ ಅಂದವರೇ ಹೆಚ್ಚು. ಆದರೆ ನಿರ್ಮಾಪಕರು ಹೀರೋಯಿನ್ ಇಲ್ಲ ಅಂದ್ರು ಕಾರ್ತಿಕ್ ನ ಚೇಂಜ್ ಮಾಡಲ್ಲ ಅಂದ್ರು. ಆ ಮಾತು ತುಂಬಾ ಎಮೋಷನಲ್ ಆಗ್ಬಿಟ್ಟೆ. ನಾನೇ ನನ್ನ ಹೀರೋ ಅಂದ್ಕೊಂಡಿರ್ಲಿಲ್ಲ. ಆದರೆ ನಮ್ಮ ಡೈರೆಕ್ಟರ್ ಅಷ್ಟು ಸಲ ನನ್ನನ್ನ ಹೀರೋ ಅಂದಿದ್ದರು. ಆಡಿಯನ್ಸ್ ಮುಂದೆ ಬಂದಾಗ ಸಿನಿಮಾ ವರ್ಕ್ ಆಗುತ್ತೆ ಎಂದಿದ್ದಾರೆ.

ನಾಯಕ ನಟಿ ಆರಾಧನಾ ಭಟ್ ಮಾತನ್ನಾಡಿ, ನಂಗೆ ಯಾರಾದ್ರೂ ಕೇಳಿದ್ರೆ ಹೀರೋಯಿನ್ ಆಗ್ಬೇಕು ಅಂತಿದ್ದೆ. ಇವತ್ತು ಗೋಲ್ಮಾಲ್ ಗ್ಯಾಂಗ್ ಸಿನಿಮಾ ಮೂಲಕ ಅದಾಗಿದ್ದೀನಿ ಅಂದ್ರೆ ನಮ್ಮ ನಿರ್ಮಾಪಕರೇ ಕಾರಣ. ನಿರ್ದೇಶಕರಾದ ಶಿವು ಸರ್ ಗೂ ಥ್ಯಾಂಕ್ಸ್. ಇಲ್ಲಿ ಸುಮಾರು ಗ್ಯಾಂಗ್ ಇದೆ. ಅದರಲ್ಲಿ ನಾನು ಯಾವ ಗ್ಯಾಂಗ್ ಗೆ ಸೇರ್ತೀನಿ ಅನ್ನೋದೆ ಟ್ವಿಸ್ಟ್. ನಿಮ್ಮ ಅಪ್ಪ ಆಗಿ ಮಂಡ್ಯ ರಮೇಶ್ ಸರ್ ಮಾಡ್ತಾ ಇದ್ದಾರೆ ಅಂದಾಗ ಭಯ ಆಗಿತ್ತು. ಆದರೆ ಅವರು ಅದನ್ನೆಲ್ಲ ಅಚ್ಚುಕಟ್ಟಾಗಿ ಹೇಳಿಕೊಟ್ಟಿದ್ದಾರೆ ಎಂದಿದ್ದಾರೆ.

ಗೊಲ್ಮಾಲ್ ಗ್ಯಾಂಗ್

Be the first to comment

Leave a Reply

Your email address will not be published. Required fields are marked *

Translate »
error: Content is protected !!