ಬಹುನಿರೀಕ್ಷಿತ ಚಿತ್ರ ‘ ರಾಮಾಯಣ ‘ ದ ವಿತರಣೆಯ ಹಕ್ಕು 250 ಕೋಟಿ ರೂಪಾಯಿಗಳಿಗೆ ಮಾರಾಟ ಆಗಿದೆ.
ಚಿತ್ರದ ಭಾರತದ ಥಿಯೇಟ್ರಿಕಲ್ ವಿತರಣೆಯ ಹಕ್ಕುಗಳು ಬಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್ಸ್ಗೆ ಸಿಕ್ಕಿದೆ.
ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ವಹಿಸಿಕೊಂಡಿದೆ ಎನ್ನಲಾಗಿದೆ. ಇದರ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಈ ಬೆಳವಣಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಆರಂಭದಲ್ಲಿ ಚಿತ್ರದ ಭಾರತೀಯ ವಿತರಣಾ ಹಕ್ಕುಗಳಿಗಾಗಿ 500 ಕೋಟಿ ರೂಪಾಯಿಗಳ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಆದರೆ ಅಂತಿಮವಾಗಿ ನಿರ್ಮಾಪಕ ನಮಿತ್ ಮಲ್ಹೋತ್ರ ಹಾಗೂ ಧರ್ಮ ಪ್ರೊಡಕ್ಷನ್ಸ್ ನಡುವೆ 250 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವರದಿಯಾಗಿದೆ.
ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಭಾಗ 2026ರ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗ 2027ರ ದೀಪಾವಳಿ ಹಬ್ಬದ ವೇಳೆಗೆ ಪ್ರೇಕ್ಷಕರ ಮುಂದೆ ಬರಲಿದೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಮಾಯಣ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೆಚ್ಚು ನಿರೀಕ್ಷೆ ಮೂಡಿಸಿದೆ. ಯಶ್ ಅವರು ರಾವಣ ಆಗಿ ಇಲ್ಲಿ ನಟಿಸುತ್ತಿದ್ದಾರೆ.
___





Be the first to comment