ಕರಾವಳಿ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡದ ನಡುವಣ ಗಲಾಟೆಯಲ್ಲಿ ಈಗ ಪ್ರಜ್ವಲ್ ಅವರ ಸಂಭಾವನೆ ವಿಷಯ ಚರ್ಚೆಗೆ ಕಾರಣ ಆಗಿದೆ.
ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸಂಭಾವನೆ, ಡಬ್ಬಿಂಗ್ ವಿಚಾರಕ್ಕೆ ಸಂಬಂಧ ಪ್ರಜ್ವಲ್ ದೇವರಾಜ್ ಹಾಜರಾಗಿರಲಿಲ್ಲ. ಪ್ರಜ್ವಲ್ ಅನುಪಸ್ಥಿತಿ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಕಾರ್ಯಕ್ರಮದಲ್ಲಿ ನಿರ್ದೇಶಕರು ಪ್ರಜ್ವಲ್ ಅವರಿಗೆ 1.25 ಕೋಟಿ ರೂಪಾಯಿ ಸಂಭಾವನೆ ನಿಗದಿ ಮಾಡಲಾಗಿದೆ. ಇನ್ನು ಕೇವಲ 25 ಲಕ್ಷ ರೂಪಾಯಿ ಬಾಕಿ ಕೊಡಲು ಇದೆ ಎಂದು ಹೇಳಿದರು.
ಈಗ ಈ ಸಂಭಾವನೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಪ್ರಜ್ವಲ್ ಅವರಿಗೆ ಇಷ್ಟೊಂದು ಮಾರ್ಕೆಟ್ ವ್ಯಾಲ್ಯೂ ಇದೆಯೇ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ತಂದೆ ದೇವರಾಜ್ ಅವರ ಪ್ರಭಾವದಿಂದ ಪ್ರಜ್ವಲ್ ಸಿನಿಮಾದಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆರಂಭದ 2-3 ಸಿನಿಮಾಗಳು ಮಾತ್ರ ಹಿಟ್ ಆಗಿವೆ. ಈಗ ಇಷ್ಟು ದೊಡ್ಡ ಸಂಭಾವನೆ ಪಡೆಯಲು ಅವರು ಅರ್ಹರೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಾರೆ ಕರಾವಳಿ ಚಿತ್ರದ ಗಲಾಟೆ ಪ್ರಜ್ವಲ್ ಅವರ ಸಂಭಾವನೆ ಬಹಿರಂಗ ಮಾಡಿದೆ. ಈಗ ಕರಾವಳಿ ಚಿತ್ರದ ಬದಲು ಅವರ ಸಂಭಾವನೆಯ ಬಗ್ಗೆಯೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
___





Be the first to comment