ರಜನೀಕಾಂತ್ ಸಿನಿಮಾಗೆ ನಿರ್ದೇಶಕರ ಗೊಂದಲ

ಸೂಪರ್‌ಸ್ಟಾರ್ ರಜನೀಕಾಂತ್ ಅವರ ಮುಂಬರುವ 173ನೇ ಸಿನಿಮಾಗೆ ನಿರ್ದೇಶಕರ ಆಯ್ಕೆ ಬಗ್ಗೆ ಗೊಂದಲ ಉಂಟಾಗಿದೆ.

ಸದ್ಯ ರಜನೀಕಾಂತ್ ಅವರು ಜೈಲರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುವ ಯೋಜನೆ ಇದೆ. ಆದರೆ ಈ ಸಿನಿಮಾದ ನಿರ್ದೇಶನದ ವಿಚಾರದಲ್ಲಿ ಗೊಂದಲ ಉಂಟಾಗಿ ತೊಂದರೆ ಆಗಿದೆ.

ಈ ಸಿನಿಮಾಗೆ ಮೊದಲಿಗೆ ಸುಂದರ್ ಸಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಸಿನಿಮಾದಿಂದ ಹೊರಬಂದರು. ನಂತರ ಸಿಬಿಲ್ ಚಕ್ರವರ್ತಿ ಅವರನ್ನು ನಿರ್ದೇಶಕರಾಗಿ ಘೋಷಿಸಲಾಗಿತ್ತು. ಆದರೆ ಪ್ರೀ-ಪ್ರೊಡಕ್ಷನ್ ಆರಂಭವಾದರೂ, ತಂಡದೊಂದಿಗೆ ಭಿನ್ನಾಭಿಪ್ರಾಯದ ಕಾರಣ ಅವರು ಕೂಡ ಹಿಂದೆ ಸರಿದರು.

ನಂತರ ಅಶ್ವತ್ ಮಾರಿಮುತ್ತು ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಅವರು ಬೇರೆ ಸಿನಿಮಾಕ್ಕೆ ಒಪ್ಪಿಕೊಂಡಿದ್ದರಿಂದ, ಈ ಸಿನಿಮಾ ತಡವಾಗುವ ಸಾಧ್ಯತೆ ಎದುರಾದ ಹಿನ್ನೆಲೆಯಲ್ಲಿ ಅವರೂ ಕೂಡ ಹೊರ ನಡೆದಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಒಂದೇ ಸಿನಿಮಾದಿಂದ ಮೂವರು ನಿರ್ದೇಶಕರು ಹೊರ ನಡೆದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಈಗ ಸಿನಿಮಾಗೆ ಹೊಸ ನಿರ್ದೇಶಕ ಯಾರು ಎಂಬುದರ ಬಗ್ಗೆ ಕುತೂಹಲ ಮೂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!