ಚರ್ಚೆಗೆ ಕಾರಣವಾದ ಡೇವಿಡ್ ಧವನ್ ಚಿತ್ರ

ಬಾಲಿವುಡ್ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರ ಹೊಸ ಚಿತ್ರ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಸಿನಿಮಾ ಎಐ ಬಳಕೆ ಕಾರಣಕ್ಕೆ ಚರ್ಚೆಗೆ ಕಾರಣವಾಗಿದೆ.

ಡೇವಿಡ್ ಧವನ್ ಮತ್ತು ಅವರ ಪುತ್ರ ವರುಣ್ ಧವನ್ ಜೋಡಿಯ ಬಹುನಿರೀಕ್ಷಿತ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಎಐ ಬಳಕೆ ಚರ್ಚೆಗೆ ಕಾರಣವಾಗಿದೆ.

ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಆರಂಭದಲ್ಲೇ ಇಬ್ಬರು ಮಕ್ಕಳು ತಮ್ಮ ತಾಯಂದಿರ ಬಗ್ಗೆ ಮಾತನಾಡುವ ದೃಶ್ಯ, ಕೊನೆಯಲ್ಲಿ ಅವರಿಗೆ ಒಬ್ಬನೇ ತಂದೆ ಎಂಬ ಟ್ವಿಸ್ಟ್ ಬಹಿರಂಗವಾಗುವ ದೃಶ್ಯದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಮಾಡಿರುವ ರೀತಿಗೆ ಟೀಕೆಗಳು ಕೇಳಿ ಬರುತ್ತಿವೆ.

ಎಡಿಟಿಂಗ್ ಅತಿಯಾಗಿ ಹಾಗೂ ಸ್ವಾಭಾವಿಕವಾಗಿಲ್ಲ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಇಲ್ಲಿ ಹೊಸತನದ ಕೊರತೆ ಇದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಡೇವಿಡ್ ಧವನ್ ನಿರ್ದೇಶನದ ಸಿನಿಮಾಗಳಲ್ಲಿ ಮನರಂಜನೆ ಖಚಿತವಾಗಿರುವುದರಿಂದ ಈ ಚಿತ್ರ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂದು ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.

ಸಿನಿಮಾ ಮೇ 20ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಸವಾಲು ಎದುರಿಸುತ್ತಿರುವ ವರುಣ್ ಧವನ್ ಅವರಿಗೆ ಈ ಚಿತ್ರ ಮಹತ್ವದ ಚಿತ್ರವಾಗಿದೆ. ಈ ಸಿನಿಮಾ ಅವರ ಕರಿಯರ್‌ಗೆ ಮರುಜೀವ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ. ಚಿತ್ರದ ಯಶಸ್ಸಿಗೆ ಅವರ ಅಭಿಮಾನಿಗಳು ಕಾದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!